Wednesday, August 7, 2013

ಸುಮ್ಮನಿರುವ ಸಮಯದಲ್ಲಿ ನೀನು ನನ್ನ ಕಾಡುವೆ

ಸುಮ್ಮನಿರುವ ಸಮಯದಲ್ಲಿ ನೀನು ನನ್ನ ಕಾಡುವೆ
ಕಾಡಿದರೂ ನೋವಾದರೂ ನಾನು ಹಾಡು ಹಾಡುವೆ!

ದೂರದಲ್ಲಿ ಯಾರೋ ಪ್ರೇಮಿ ಎಡವಿದಂತೆ ವೀಣೆಯ
ಮೀರಿ ಬರುತಲಿಹುದು ಗೆಳತಿ ಒಂದೇ ಎಳೆಯ ರಾಗವು
ನನ್ನನೇ ಕರೆದಂತಿದೆ ನನಗಾಗಿಯೆ ಮೊರೆದಂತಿದೆ!
ಬರೆದೆನಿದೋ ಹಾಡುತಲಿರು ಈ ನೋವಿನ ಹಾಡನು

ಮಳೆಗೆ ಹೊಟ್ಟೆಕಿಚ್ಚು ಬಂದು ಆ ರಾಗವ ಕೆದಕಿದೆ
ಈ ಬೇಸರ ಕಣ್ಣೀರೊಲು ಹನಿಯ ಜೊತೆಗೆ ಬೆರೆತಿದೆ
ಹಾಡು ಕಾಯಬಹುದೆ ನನಗೆ ಮುಂದಿನ ದಿನ ಹುಟ್ಟಲು?
ನೋವು ಒಂದು ಸಹಜ ಪ್ರಾಸ! ಎಲ್ಲಾ ಕಾವ್ಯ ಕಟ್ಟಲು.

ಹಳೆಯ ನಮ್ಮ ನಗೆಗಳೆಲ್ಲ ಹೊಳೆವ ಮಳೆಯ ಹನಿಗಳಂತೆ
ಬೆಳಕಿನ ಕೋಲ್ಮಿಂಚಿಗಾಗಿ ಕಾಯಬೇಕು ನಾನು!
ಸಿಡಿಲಾಗಿಯೆ ಬರಬಾರದೆ ನನ್ನ ಪ್ರೀತಿ ಬೆಳಕೆ
ಬೇಸರವನೆ ಕೊನೆಯಾಗಿಸಿ ನಾ ಸೇರುವೆ ಬಾನು!


4 comments:

sunaath said...

‘ನೋವು ಒಂದು ಸಹಜ ಪ್ರಾಸ! ಎಲ್ಲಾ ಕಾವ್ಯ ಕಟ್ಟಲು’....ವಾಹ್!

Badarinath Palavalli said...

ಕೋಲ್ಮಿಂಚಿಗಾಗಿ ಕಾದಿರುವ ನಮ್ಮಂತವರಿಗಾಗಿಯೇ ಇದು ನಿಮ್ಮ ಕವನ.

Anonymous said...

ಮಳೆಗೆ ಹೊಟ್ಟೆಕಿಚ್ಚು ಬಂದು ಆ ರಾಗವ ಕೆದಕಿದೆ
ಈ ಬೇಸರ ಕಣ್ಣೀರೊಲು ಹನಿಯ ಜೊತೆಗೆ ಬೆರೆತಿದೆ


ಕಿಣ್ಣಣ್ಣಾ ಈ ಸಾಲು ಸಕ್ಕತ್ತಾಗಿದ್ದು....

Anonymous said...

ಮಳೆಗೆ ಹೊಟ್ಟೆಕಿಚ್ಚು ಬಂದು ಆ ರಾಗವ ಕೆದಕಿದೆ
ಈ ಬೇಸರ ಕಣ್ಣೀರೊಲು ಹನಿಯ ಜೊತೆಗೆ ಬೆರೆತಿದೆ

ಕಿಣ್ಣಣ್ಣಾ ಈ ಸಾಲು ಸಕ್ಕತ್ತಾಗಿದ್ದು....


SuSha Hegde