Friday, August 16, 2013

ಅವನೋ ಅಲ್ಲ ಇವನೋ...

ಅವ ಪೇಟೆಯ ಹುಡುಗ
ಇವ ಹಳ್ಳಿಯ ಹುಡುಗ.

ಅವನೆಂಟನೆ ಸ್ಟಾಂಡರ್ಡು
ಇವನೆಂಟನೆ ಎರಡು!

ಅವನ ಬಣ್ಣ ಬೆಣ್ಣೆ
ಇವನ ಬಣ್ಣ ಎಣ್ಣೆ

ಅವನಿಗಿತ್ತು ಸಾಕ್ಸು
ಇಂವ ಭೂಮಿಯ ಜೆರಾಕ್ಸು!

ಅವನು ಹಾಲು ಕುಡಿಯುವವ
ಇವನು ಹಾಲು ಕರೆಯುವವ

ಅವನಿಗೆ ಚೇಳು ಕಚ್ಚುವುದು;
(ಸರ್ ಚೇಳು ನೋಡಿದವರು)
ಇವನಿಗೆ ಚೇಳು ಕುಟುಕುವುದು;
(ಮಾಸ್ತರು ನೋವುಂಡವರು)

ಮುಂದೆ?

ಅವನು ಎಲ್ಲ ಗಳಿಸುವವನು
ಇವನು ಎಲ್ಲ ಉಳಿಸುವವನು.

4 comments:

Badarinath Palavalli said...

ಇಲ್ಲಿ ಇಂದು ಸಂಗತಿ ಮನಸ್ಸಿಗೆ ನಾಟಿತು, ಬಹುಶಃ ಇಂದಿಗೂ ನಮ್ಮ ಹಳ್ಳಿ ಶಾಲೆಗಳಲ್ಲಿ ಮಾಸ್ತರರೂ ಮಕ್ಕಳ ಅನುಬಂಧ ಅನುರಾಗದ ಅನುಬಂಧ!

ಇನ್ನೊಂದು, ನಾನು 25 ವರ್ಷಗಳ ಹಿಂದೆ ನ್ಯಾಷನಲ್ ಕಾಲೇಜಿಗೆ ಓದಲು ಬಂದಾಗ ನನ್ನ ಪರಿಸ್ಥಿತಿ ನೆನಪಾಯಿತು.

ಮೌನರಾಗ said...

ಅವನಿಗೆ ಚೇಳು ಕಚ್ಚುವುದು;
(ಸರ್ ಚೇಳು ನೋಡಿದವರು)
ಇವನಿಗೆ ಚೇಳು ಕುಟುಕುವುದು;
(ಮಾಸ್ತರು ನೋವುಂಡವರು)

ಈ ಸಾಲುಗಳು ಅರ್ಥವಾಗದೇ ಇದ್ದರೂ ಮಿಕ್ಕೆಲ್ಲವೂ ಹೌದಲ್ಲ ಅನಿಸುವ ಹೊತ್ತಿಗೆ ಇಷ್ಟವೂ ಆಯಿತು...

ಕವನದ ಒಟ್ಟು ಅರ್ಥವಾಗಿ ಕೊನೆಯ

"ಅವನು ಎಲ್ಲ ಗಳಿಸುವವನು
ಇವನು ಎಲ್ಲ ಉಳಿಸುವವನು"

ಈ ಸಾಲುಗಳು ನಿಲ್ಲುತ್ತವೆ.. ಸೂಪರ್ ಕಿಟ್ಟಣ್ಣ...

sunaath said...

ಇದೀಗ ಬೇರೊಂದು ತರಹದ ಕವನ! ವಿನೋದ ಹಾಗು ವಿಷಾದವನ್ನು ಜೊತೆ ಮಾಡಿದ ಶೈಲಿ ಪ್ರಶಂಸನೀಯ. ಕವನದ ಸಲೀಸಾದ ಗತಿ ಮೆಚ್ಚುವಂತಹದು. ಅಭಿನಂದನೆಗಳು.

PRASHANTH NAYAK said...

ಚೆನ್ನಾಗಿದೆ.......
ಈ ಕವನದ ಸಾಲುಗಳು ಹಲವರ ಅನುಭವಗಳ ಬುತ್ತಿ ಗ೦ಟನ್ನು ಬಿಚ್ಚುವಲ್ಲಿ ಸಫಲವಾಗಿವೆ.... Great going kitty.. go ahead