ಹರಿವಲ್ಲಿ ಕಂಡೆ ನಿಂತಲ್ಲಿ ಕಂಡೆ
ನಾ ನಿನ್ನ ಮುದ್ದು ಮುಖವ
ಹೂವಲ್ಲು ನಗುವು ನಗುವಲ್ಲು ಹಾಡು
ಇದಾವ ಬಗೆಯ ವಿಭವ ?
ಮನದೊಳಗೆ ನಿಂತು ಪಟವಾಗಿ ಮೆರೆವ
ಬಯಕೆಯಲಿ ಪ್ರೇಮ ಜನ್ಯ
ಎದೆಯೊಲವು ಹರಿದು ಭಾವನೆಯ ಬಣ್ಣ
ತುಂಬಿರಲು ಬದುಕು ಧನ್ಯ
ಕಣ್ಣೊಳಗೆ ಅಡಗಿ ಆಡುತಲೇ ಇರುವ ಕನಸೆಲ್ಲ ಹೊರಗೆ ಬರಲಿ
ಉಸಿರಲ್ಲಿ ಬೆರೆತು ಹಾಡಾಗಿ ಇರುವ
ಮಾತೆಲ್ಲ ಬಿರಿದು ನಗಲಿ
ನೀಡುವುದು ಪ್ರೀತಿ , ಪಡೆಯುವುದು ಅಲ್ಲ
ನಾನೆಲ್ಲ ಕೊಟ್ಟೆ ನಿನಗೆ
ಹಿಂತಿರುಗಿ ಕೊಟ್ಟು ಋಣಮುಕ್ತಳಾಗೆ
ನಾ ಕೊಟ್ಟ ಪ್ರೀತಿ ನನಗೆ !!
೨೦೦೫

ಉಸಿರಲ್ಲಿ ಬೆರೆತು ಹಾಡಾಗಿ ಇರುವ
ReplyDeleteಮಾತೆಲ್ಲ ಬಿರಿದು ನಗಲಿ
nice lines.. keep it up
Wah! You have that grip over metre and alliteration I so much love. That and the meaning really make for a poem. The rest are to fill space. Thank you.
ReplyDeleteನೀಡುವುದು ಪ್ರೀತಿ , ಪಡೆಯುವುದು ಅಲ್ಲ
ReplyDeleteನಾನೆಲ್ಲ ಕೊಟ್ಟೆ ನಿನಗೆ ....vaaa .ee salu thumba khushi athu ...heenge baravadara munduvarisu...ninna kalpaneyellavu aksharali mudali....edu athigeya harike.......
ನೀಡುವುದು ಪ್ರೀತಿ , ಪಡೆಯುವುದು ಅಲ್ಲ...
ReplyDeleteಅಂತ ಹೇಳಿ ಕೊನೆಯಲ್ಲಿ....
ಪ್ರೀತಿಯನ್ನು ಹಿಂತಿರುಗಿ ಬಯಸುವುದು...
ಇದರ ಭಾವಾರ್ಥವೇನು.... ?
ನೀಡುವುದೇ ಪ್ರೀತಿಯಾದಮೇಲೆ ಮತ್ಯಾಕೆ ಪಡೆಯುವುದರ ಆಸೆ.... :)
ಚೆನ್ನಾಗಿದ್ದು ಕಿಣ್ಣಣ್ಣ.. ತುಂಬಾ ಇಷ್ಟ ಆತು.. :)
ReplyDelete