ಮೊದಲ ನೋಟಕೆ ಯಾವ ಭಾವವೋಸುಳಿಯಿತೇನೋ ಮನಸಲಿ
ಒಡಲ ಮಾತನು ಬಯಸಿ ಹೇಳಿದೆ
ಪಡೆದೆ ಏನೋ ನೆನಪಲಿ
ಬರಿಯ ಆಸೆಗೆ ಹಗಲು ಕನಸಿಗೆ
ಗೆಲುವೆ ಹೊಸಕಿತೆ ನಗೆಯನು ?
ಕಳೆದೆ ಏತಕೆ ಪ್ರೀತಿ ಮಾತನು ?
ಒಲವೆ ಇರಿಯಿತೆ ನನ್ನನು?
ನೂರು ನೋವಿನ ಎಲ್ಲೆಯಾಚೆಗೆ
ಎಲ್ಲೋ ನಲಿವಿನ ನಗುವಿದೆಮುನಿಸು ವಿರಸದ ತೋಟದಲ್ಲಿಯೇ
ಹೊಸತು ಪ್ರೇಮದ ಗಿಡವಿದೆ
ಹಾರೋ ಚಿಟ್ಟೆಯೇ ಏರು ಮೇಲಕೆ
ಹೂವ ತೊರೆ ಹಳೆ ನೆನಪನು
ಮೇಲೆ ಕಾಣುವ ತಾರೆಯೊಲುಮೆ
ಗಳಿಸು ;ಪ್ರೀತಿಯ ಬಾಳನು .
29/01/2005
arthapurnavada kavana.........
ReplyDeleteNice one ..ಹೀಗೆ ನಿಮ್ಮ ಬತ್ತಳಿಕೆಯಿಂದ ಚಂದದ ಕವನಗಳು ಬರ್ತಾ ಇರಲಿ. :)
ReplyDeleteಧನ್ಯವಾದಗಳು :)
ReplyDeleteಬತ್ತಳಿಕೆ ಹೇಳಿದ್ದು ತುಂಬ ಕುಶಿ ಯಾಕಂದ್ರೆ ಈಗ ಸಂಪಾದನೆ ಕಡಿಮೇನೆ .. ಎಲ್ಲ ಹಳೆದು :)