ನಿನ್ನೆ ನಾನು ಕಂಡೆ ಕನಸ
ಪಾತ್ರ ಅದಲು ಬದಲು
ರಾಮನಿಲ್ಲ ತ್ರೇತಾಯುಗದಿಕೃಷ್ಣ ಜನುಮವಾಗಲು
ಅಂತು ಇಂತು ಕೃಷ್ಣ ಕೂಡ
ರಾಮನಂತೆ ಕಾಡಿಗೋದನು
ಕೊಂದನೆಲ್ಲ ರಕ್ಕಸರ
ಮುನಿಗಳನ್ನ ಕಾಯ್ದನು
ಕೃಷ್ಣನಾದರೇನು ಇಲ್ಲಿ ಕೂಡ
ರಾವಣೇಂದ್ರ ಬಂದನು
ಸೀತೆಯನ್ನು ಆಗಿನಂತೆ
ಈಗಲೂ ಕದ್ದೊಯ್ದನು
ಮುಂದುವರೆದ ಕೃಷ್ಣ ಕೂಡ
ವಾನರರ ಕೂಡಿಕೊಂಡ
ಕೃಷ್ಣನಿಗೆ ಸೀತೆ ತರುವ ಭಾಷೆ
ಕೊಟ್ಟ ವಾನರ ಮುಖಂಡ
ಹನುಮ ಹೊರಟ ಸೀತೆಯನ್ನುಹುಡುಕೊ ಹುರುಪಿನಿಂದ
ಕಂಡು ಕರೆದುಕೊಂಡು ಬಾರೊ
ಎನುವ ಮಾತು ಕೃಷ್ಣನಿಂದ
ಕಂಡ ಸೀತಾಮಾತೆಯನ್ನು ಹನುಮ
ಪೇಳ್ದ ಕೊಟ್ಟು ಉಂಗುರ
ಮಾತೆಯನ್ನು ಹೊತ್ತು ಹಾರಿ
ಬಂದ ಕೃಷ್ಣನ ಹತ್ತಿರ.
ಕದ್ದ ಲಂಕಾಧೀಶನೆದುರು
ಯುದ್ಧ ಮಾಡಲಿಲ್ಲ
ವರ್ಷ ಮುಗಿಸಿ ರಾಜ್ಯ ಸೇರಿ
ಸುಖದಿ ಇದ್ದರೆಲ್ಲ.
೧೮.೦೬.೨೦೧೧
vichitravaagide
ReplyDelete