Tuesday, December 27, 2011

ಚಂದ್ರ ಶಿಕಾರಿ .



ನಾನು ಚಂದಿರ ಮತ್ತೆ ಅವಳು
ಅವಳೆಂದರೆ ನನ್ನದೇ ನೆರಳು !!

ನಾನು ಕಿರಣಗಳನ್ನ ತಡೆಯುತ್ತೇನೆ
ಚೆಂದುಟಿ ಒಣಗದಂತೆ
ಅವಳು ಕಿರಣಗಳನ್ನ ಸೆಳೆಯುತ್ತಾಳೆ
ಚಂದಿರನೂ ಕರಗುವಂತೆ

ಇಂದಾದರೂ ಪೂರ್ಣ ಚಂದಿರನ
ಕಾಣಬೇಕೆಂಬ ಬಯಕೆ!
ಅವಳ ಮುಂಗುರುಳಿನಲ್ಲೇ ಸಿಲುಕಿ
ಚಂದಿರ ಒದ್ದಾಡುವನೇನೋ ?
೪.
ಎಲ್ಲರೂ ಅಂದರು ಚಂದಿರ
ಇದ್ದಾಗ ರಾತ್ರಿ ತಂಪೆಂದು.
ಹೆಮ್ಮೆ ನನ್ನಲ್ಲಿ ! ನನಗೆ
ಚಂದಿರ ಬೆಚ್ಚನೆಯ ಆಶ್ವಾಸ !

೨೭-೧೨-೨೦೧೧

17 comments:

  1. ಅವಳ ಮುಂಗುರುಳಿನಲ್ಲೇ ಸಿಲುಕಿ
    ಚಂದಿರ ಒದ್ದಾಡುವನೇನೋ ?.... nice

    ReplyDelete
  2. ಅವಳು ಕಿರಣಗಳನ್ನು ಸೆಳೆಯುತ್ತಾಳೋ ಅಥವಾ ಕಿರಣನನ್ನು ಮಾತ್ರ ಸೆಳೆಯುತ್ತಾಳೋ ?...
    Nice ones...

    ReplyDelete
  3. ಒಳ್ಳೇ ಕಲ್ಪನೆಗಳು :-)

    ReplyDelete
  4. ಕಿರಣದೊಳು ಚಂದಿರನೋ...ಚಂದಿರನೊಳು ಕಿರಣವೋ... ಅದ್ಭುತ ಕಲ್ಪನೆ..ಅರ್ಥಗರ್ಭಿತವಾದ ಕವನ...

    ReplyDelete
  5. ಅಹ್ಹ.. ಈಶ್ವರ ಕಿರಣರು ಚೆಲ್ಲಿರುವರು..
    ಮನದೊಳಗೆ ಸುಂದರ ಚಂದಿರ ಕಿರಣಗಳನ್ನು ..
    ಚೆಂದದ ಕವನಗಳ ಸಾಲುಗಳಲ್ಲಿ ..
    ಚೆಂದಿರನನ್ನು ಕಲ್ಪನೆಯಲ್ಲಿ ಬಂಧಿಸುತಲಿ..

    ನಾನು ಚಂದಿರ ಮತ್ತೆ ಅವಳು
    ಅವಳೆಂದರೆ ನನ್ನದೇ ನೆರಳು.....

    ಇಲ್ಲಿ ನಾನು ಎನ್ನುವುದು ಸೂರ್ಯನು ..
    ಚಂದಿರ ಮತ್ತು ಅವಳು ಎನ್ನುವುದು ಭೂಮಿಯು...
    ಆಲ್ಲಿ ಬೀಳುವ ನೆರಳು ಸೂರ್ಯ ಗ್ರಹಣವೂ ಸಹ ಒಂದು ಕಲ್ಪನೆ...

    ಎರಡನೇ ಕವನ ಕಲ್ಪನೆ..
    ಸೂರ್ಯನು ಕಿರಣವನ್ನು ಕಾಲಕ್ಕೆ ತಕ್ಕಂತೆ ಕೊಡುತ್ತಾನೆ
    ಅದರ ಶಾಖ ಮತ್ತು ಬೆಳಕು.. ಜೀವ ಸಂಕುಲಕ್ಕೆ ಬೇಕೇ ಬೇಕಾದ ಔಷದವಿದ್ದಂತೆ..
    ಭೂಮಿಯು ಬೆಳಕನ್ನು ಬಯಸಿದಾಗ ಅಲ್ಲಿ ಹಗಲು ಸೂರ್ಯ ಕಿರಣಗಳು ಧರೆಗೆ ಧಾವಿಸಲು

    ಮೂರನೇ ಕವನ ಕಲ್ಪನೆ..
    ಸೂರ್ಯನಿಗೆ ಹಗಲು .. ಚಂದ್ರನಿಗೆ ಇರುಳು.. ಇಬ್ಬರೂ ಸಹ ಒಬ್ಬರೊನ್ನೊಬ್ಬರು
    ನೋಡಲಾಗದ ಹಗಲು ಇರುಳು.. ಇರಲು ಇಲ್ಲಿ .. ಸೂರ್ಯನ ಆಸೆಯು ಚೆಂದಿರನನ್ನು ಕಾಣಲು
    ಈಗ ಇಲ್ಲಿ ಕಲ್ಪನೆಯ ಒಳಗೆ ಒಂದು ಕಲ್ಪನೆ ..
    ಇರುಳು ಕಪ್ಪು .. ಕಪ್ಪು ಕೆಶರಾಶಿಯು ಮುಂಗುರುಳ ಹೋಲಿಕೆಯಲ್ಲಿ .. ಚಂದಿರನು ಈ ಭೂಮಿಯ
    ಸುತ್ತುವ ಒಂದು ಪ್ರೇಮಿಯು .. ಪ್ರೀತಿಯಲ್ಲಿ ಕಾಣದಾ ಮುಂಗುರುಳಿನಂತಹಾ ಇರುಳಿನಲ್ಲಿ.. ಅಲೆದಾಟದ
    ಜೀವನ.. ಕಾರಣ ಪ್ರೀತಿಯನ್ನು ಮತ್ತು ಪ್ರೀತಿಯಲ್ಲಿ ಕುರುಡು ಎನ್ನುವ ಭಾವನೆಗಳ ವರ್ಣನೆ...
    ಚಂದಿರ ಕಂಡರೂ ಸಹ ಬಲು ಸಣ್ಣವನು .. ಪೂರ್ಣವೆಂದು ಕಾಣುವನು ಎನ್ನುವ ಹಂಬಲ..

    ಕೊನೆಯ ಮತ್ತು ನಾಲ್ಕನೆಯ ಸಾಲಿನ ಕಲ್ಪನೆ..
    ಹುಣ್ಣಿಮೆಯ ಚಳಿಯನ್ನು ಕುರಿತಾದ ಮಾತುಗಳು.. ಎಲ್ಲರೂ ಹೇಳುವುದು ಹುಣ್ಣಿಮೆ ಚಂದಿರ ಬಲು ಸುಂದರ.
    ಆಗ ಬರುವ ಬೆಳಕು ಮತ್ತು ಆ ಮೆತ್ತನೆಯ ಗಾಳಿಯ ಸ್ಪರ್ಶ ಇಲ್ಲಿ ರಾತ್ರಿಯ ತಂಪು ಮತ್ತು ತಂಗಾಳಿ..
    ಸೂರ್ಯನೆಗೆ ಹೆಮ್ಮೆ ಇಲ್ಲಿ .. ಅವನು ಇಲ್ಲದ ಸಮಯದೊಳು ಕಾಯುವನು ಚಂದಿರನು ಭೂಮಿಯನ್ನು
    ಅದೇ ಒಂದು ಮನಸ್ಸಿನ ಆಶ್ವಾಸನೆಯನ್ನು ಚಂದಿರನು ಸೂರ್ಯನಿಗೆ ಕೊಟ್ಟಿರುವನು.. ಇಲ್ಲಿ ಇಬ್ಬರು
    ಪ್ರೇಮಿಗಳು ಭೂಮಿಗೆ .. ಒಬ್ಬರ ನಂತರ ಮತ್ತೊಬ್ಬರು ಕಾಯುತ್ತಿರುವರು ಅವಳನ್ನು...
    ಸೂರ್ಯನು ಇಲ್ಲಿ ಪ್ರೇಮಿಯು ಪ್ರಾಣನಾಥನಾಗಿ .. ಚಂದಿರನು ಸಹ ಪ್ರೇಮಿಯು ಪ್ರಿಯಕರನಾಗಿ... :)

    ಮೆಚ್ಚಿ ಓದುವ ಮನಸ್ಸಿನ ಓದುಗರೇ .. ಕವಿತೆಯ ಅರ್ಥವೂ ಬೇರೆಯೇ ಇದೆ.. ಆದರೆ ನಮ್ಮ ಕಲ್ಪನೆಯಲ್ಲಿ
    ಈ ಕವನದ ಸಾಲುಗಳಿಗೆ ಅರ್ಥಗಳು ಅನೇಕ .. ವಿವಿಧ ಬಗೆಯ ದೃಷ್ಟಿಕೋನದಲ್ಲಿ ಆಲೋಚಿಸಿ ನೋಡಿದಾಗ..
    ಒಟ್ಟಾರೆ ಮನಮೆಚ್ಚುವಂತಹಾ ಕವಿತೆ.. ಒಪ್ಪಿದೆವು ಕವಿಯ ಆಲೋಚನೆಯ.. ಸೊಗಸಾರ ರಚನೆ.. ಈಶ್ವರ್ .. ಸರ್.. :)

    ReplyDelete
  6. ವಾವ್. ಎಂತ ಹೋಲಿಕೆ!

    ಕಡೆ ಚರಣವು ಪೂರ್ಣ ಪಾಠಕ್ಕೆ ಪೂರ್ಣ ಚಂದಿರ.

    ಅವಳು ನೆರಳು ಎನ್ನುವಲ್ಲೇ ಕವಿಯ ಚಾತುರ್ಯತೆ ಮೆರೆದಿದೆ. ಅವಳಿಗೇ ತಪ್ಪು ಒಪ್ಪುಗಳನ್ನು ಅರ್ಪಿಸುವ ಬುದ್ಧಿವಂತಿಕೆ ಇದೆ.

    ಉತ್ತಮ ಸರಸಮಯ ಕವನ.

    ReplyDelete
  7. ನೀಟಾದ ಕವಿತೆ.ಚೆಂದ ಇದೆ.ಬರೆಯುತ್ತಿರಿ.
    -RJ

    ReplyDelete
  8. ತುಂಬಾ ಚೆನ್ನಾಗಿದೆ... ಅಮವಾಸ್ಯೆಯ ರಾತ್ರಿಯಲ್ಲೂ ಹಾಲ್ಬೆಳದಿಂಗಳು ಇರುತ್ತದೆಂದೆಂದರೆ
    ಅದು- ಇಂಥ ಕವಿತೆಗಳಿಂದಲೇ.

    ಕಿರಣನ ಶಿಕಾರಿಮಾಡಿದ ಅವಳು-ಯಾರವಳು ಕಿಣ್ಣಾ ??

    ReplyDelete
  9. ಚಂದವಾದ ಕವಿತೆ .......ನಿಮ್ಮ ಕಾವ್ಯ ಕಿರಣ ಹೀಗೆಯೇ ಹರಡುತ ಇರಿ.....

    ReplyDelete
  10. ಚನ್ನಾಗಿದೆ ಕವಿತೆ.. ಹೀಗೆ ಬರೆಯುತ್ತಿರಿ

    ReplyDelete
  11. ಕವಿತೆ ಚೆನ್ನಾಗಿದೆ.. ವರ್ಣನೆ super... ಕಿರಣನನ್ನು ಸೆಳೆದ ಚಂದ್ರಮುಖಿ ಅವಳಾರು???

    ReplyDelete
  12. I enjoy reading articles from your site. Keep on writing. sildenafil citrate

    ReplyDelete
  13. ಚೆಂದದ ಕವಿತೆ, ಸ್ವಲ್ಪ ತಡವಾಗಿ ನಿಮ್ಮ ಬ್ಲಾಗಿಗೆ ಭೇಟಿ ನೀಡಿದೆ.ಕೊನೆಯ ನುಡಿಯಂತೂ ಇನ್ನೂ ಚೆಂದ.

    ReplyDelete
  14. ಒಳ್ಳೆ ಕವನ ಕಿಣ್ಣಣ್ಣ :-)

    ReplyDelete