ಕೊಳಲನೂದು ಮಾಧವಾ ರಾಧೆ ಬರುವಳು
ಕೊಳಲನೂದು ಮಾಧವಾ
ರಾಧೆ ಬರುವಳು !
ನಿಲಲಾರಳು ದನಿಯ ಕೇಳಿ
ಬಂದೆ ಬರುವಳು !
ನೊಂದಿಹಳೆ ರಾಧೆ ಹೇಳು
ಮುನಿದು ಹೋದಳೇ
ಚಂದದಿಂದುಲಿವ ನುಡಿಗೆ
ಮರಳಿ ಬಾರಳೇ ?
ಪ್ರೇಮದುಸಿರ ಹರಿಸಿ ನೀನು
ನುಡಿಸೆ ಮುರಳಿಯಾ
ಸಾಮದೊಳು ಕರೆವುದದು
ನಿನ್ನ ರಾಧೆಯಾ
ಆ ನೆರಳೊಳು ನೋಡು ರಾಧೆ
ಮರಳಿ ನಿಂದಳೇ ?
ಜೇನು ದನಿಯ ಮುರಳಿ ಕರೆಗೆ
ಸಿರಿಯು ಬಾರಳೇ ?
೧೩-೦೩-೨೦೧೨
ಲಯ ತುಂಬಿದ ಸುಂದರ ರಾಗಾಲಾಪನೆ.ಗೇಯತೆಯು ಪಕ್ವಗೊಂಡು ಮುದ್ದಾಗಿ ಹರಿದಿದೆ.ಭಾವಲಹರಿಯು ಭಕ್ತಿಪರವಶಗೊಂಡಿದೆ.ಸುಂದರ ಕವಿತೆ.ಇಷ್ಟವಾಗುವುದು.ಅಭಿನಂದನೆಗಳು.
ReplyDeleteಮಧುರ ಭಾವಗೀತೆಗಳು ಮಾಯವಾಗುತ್ತಿರುವ ಈ ಕಾಲದಲ್ಲಿ, ನಿಮ್ಮ ಈ ಸುಂದರ ಕವನವು ಮನಕ್ಕೆ ಮುದಕೊಡುತ್ತಿದೆ.
ReplyDeleteಮಸ್ತ್ ಇದ್ದು :)
ReplyDeleteಸಿಹಿಯಾದ ಭಾವಗೀತೆ. ಮುರಳಿಯ ಕೊಳಲುಲಿ ಇಂಪಂತೆ ಮನಕೂ ತಂಪಾಯಿತು.
ReplyDeleteವಾವ್, ಮಸ್ತ್ ಇದ್ದು..
ReplyDeletenice
ReplyDeleteಚೆಂದ ಇದ್ದೋ :-)
ReplyDeleteಮಧುರಾನುಭೂತಿಯನ್ನೀಯುವ ಭಾವಪೂರ್ಣ ಕವನ.....
ReplyDeletechandiddu....
ReplyDelete