Wednesday, March 14, 2012

ಕೊಳಲನೂದು ಮಾಧವಾ ರಾಧೆ ಬರುವಳು


ಕೊಳಲನೂದು ಮಾಧವಾ 
ರಾಧೆ ಬರುವಳು !
ನಿಲಲಾರಳು ದನಿಯ ಕೇಳಿ
ಬಂದೆ ಬರುವಳು !


ನೊಂದಿಹಳೆ ರಾಧೆ ಹೇಳು
ಮುನಿದು ಹೋದಳೇ
ಚಂದದಿಂದುಲಿವ ನುಡಿಗೆ
ಮರಳಿ ಬಾರಳೇ ?


ಪ್ರೇಮದುಸಿರ ಹರಿಸಿ ನೀನು
ನುಡಿಸೆ ಮುರಳಿಯಾ
ಸಾಮದೊಳು ಕರೆವುದದು
ನಿನ್ನ ರಾಧೆಯಾ


ಆ ನೆರಳೊಳು ನೋಡು ರಾಧೆ
ಮರಳಿ ನಿಂದಳೇ ?
ಜೇನು ದನಿಯ ಮುರಳಿ ಕರೆಗೆ
ಸಿರಿಯು ಬಾರಳೇ ?


೧೩-೦೩-೨೦೧೨

9 comments:

  1. ಲಯ ತುಂಬಿದ ಸುಂದರ ರಾಗಾಲಾಪನೆ.ಗೇಯತೆಯು ಪಕ್ವಗೊಂಡು ಮುದ್ದಾಗಿ ಹರಿದಿದೆ.ಭಾವಲಹರಿಯು ಭಕ್ತಿಪರವಶಗೊಂಡಿದೆ.ಸುಂದರ ಕವಿತೆ.ಇಷ್ಟವಾಗುವುದು.ಅಭಿನಂದನೆಗಳು.

    ReplyDelete
  2. ಮಧುರ ಭಾವಗೀತೆಗಳು ಮಾಯವಾಗುತ್ತಿರುವ ಈ ಕಾಲದಲ್ಲಿ, ನಿಮ್ಮ ಈ ಸುಂದರ ಕವನವು ಮನಕ್ಕೆ ಮುದಕೊಡುತ್ತಿದೆ.

    ReplyDelete
  3. ಸಿಹಿಯಾದ ಭಾವಗೀತೆ. ಮುರಳಿಯ ಕೊಳಲುಲಿ ಇಂಪಂತೆ ಮನಕೂ ತಂಪಾಯಿತು.

    ReplyDelete
  4. ವಾವ್, ಮಸ್ತ್ ಇದ್ದು..

    ReplyDelete
  5. ಚೆಂದ ಇದ್ದೋ :-)

    ReplyDelete
  6. ಮಧುರಾನುಭೂತಿಯನ್ನೀಯುವ ಭಾವಪೂರ್ಣ ಕವನ.....

    ReplyDelete