Wednesday, April 25, 2012

ಯುವಕನ ಹಾಡು !

೧.
ಓ ತಂದೆ
ಈ ಬಿಸಿಲು ಏಕೆ ತಂದೆ ?

ಹೀಗೆಂದ ಯುವಕ
ಕರಬೂಜ ತಿಂದ,
ಭಿತ್ತಕ್ಕೆ ಬಿಸಿಲು,
ಬಿಸಿಗೆದ್ದ ತೊಗಟೆ
ಮೊದಲ ಮಳೆಗೆ
ಟಿಸಿಲೊಡೆದದ್ದ ಕಂಡ


ಅವನು ಗುರು
ಚೈತನ್ಯದ ಚಿಗುರು!

ಬಂದವರಿಗೆಲ್ಲಾ ಆನಂದ ತಂದ
ಈ ಯುವಕ ಬಂದ !
ಗುರುವಿನ ಕಾವಿಯ ನೂಲು
ಸೀರೆಯ ರೇಶಿಮೆಯ ಜೊತೆಗಿತ್ತು !

೩.
ಬೆಂಕಿ ಸ್ವಾಮಿ !
ಮುಟ್ಟಲಿಲ್ಲವೋ ಕಾಮಿ,

ವಯಸ್ಸೆಷ್ಟು ? ಕೇಳಿದ
ಯುವಕಗಿಪ್ಪತ್ತಾರು ಎಂದ !
ಇದ್ದ ಕಾಮಕ್ಕೋ ನೂರು
ಒಣಗಿದ ಗಿಡಮರಕ್ಕೆ ಹಸಿರು ಬೇರು !

೪.
ಒಡತಿ ಇದ್ದಾಳೆಯೇ ?
ಇದ್ದವಳು ವಶ್ಯ !

ಹುಡುಕಿದ್ದು ಗಂಧ
ಮೀನಲ್ಲಿ ಸಿಕ್ಕಿದ್ದು ಯಾವ ಬಂಧ ?
ಧಾತುಚಲನೆಗೆ
ಮೀನಿನ ಹೆಜ್ಜೆಗಳು
ಕಾಣಲಾರದು, ಯುವಕನೆಂದ !

4 comments:

  1. ಚೆಂದದ ಕವನ !!ಅಭಿನಂದನೆಗಳು.

    ReplyDelete
  2. ಒಂದೇ ಕವಿತೆಯಲ್ಲಿ ಅದು ಹೇಗೆ ಹಲ ಭಾವಗಳನ್ನು ಸಿದ್ಧಿಸುತ್ತೀರಿ ಭಟ್ಟರೇ? ನನಗೆ ಇದೇ ಸೋಜಿಗ.

    ವಾರೆವಾ ಅನ್ನುವಂತಹ ರಚನೆ.

    ReplyDelete
  3. ಚೆನ್ನಾಗಿದೆ ಕವಿತೆ. ಅಭಿನಂದನೆಗಳು.

    ReplyDelete
  4. ಚೆನ್ನಾಗಿದೆ
    ಸ್ವರ್ಣಾ

    ReplyDelete