Tuesday, October 23, 2012

ಬರಿಯ ನಾನು!


ನನ್ನ ಕಾಯುವ ಅವಳು ಕರಿಮುಗಿಲೊ ಸುಳಿಮಿಂಚೊ
ಸುಮ್ಮನುರಿಯುವ ಹಗಲೊ ತಿಳಿಯದಾದೆ
ಸೆಳೆತವೇನೋ ತಿಳಿಯೆ, ಮತ್ತೇನೂ ಹೇಳದೆಯ
ಇನ್ನೂ ಕಾಯುತಲಿರಲಿ; ತಿರುಗಿ ಬಂದೆ!

ಹೇಗೆ ಹೇಳುವುದಿನ್ನು ಒಲವೆಂದೊ ಚೆಲುವೆಂದೊ
ಸಾಗಹಾಕುವ ಸಮಯ ಸಾಕು ಎಂದೋ?
ನೋಡನೋಡುತ್ತಲೇ ಬೆಳೆದ ಮಲ್ಲಿಗೆ ಬಳ್ಳಿ
ಹೂ ಬಿಡದೆ ಸೊರಗೀತೆ? ತಪ್ಪು ನಿನ್ನದೆಂದು?

ಮಳೆಯ ಹನಿ ಬರಬೇಕು, ಒಡೆದು ಆ ಮುಗಿಲುಗಳು
ಕರಗಬೇಕು ಅಲ್ಲಿ ಹಾಲು ಜೇನು!
ಇಲ್ಲವಾದರೆ ಸುಟ್ಟು ಕರಕಲಾಗುತ ಹೀಗೆ
ಇರಬೇಕು ಇನ್ನು ನಾನು ನೀನು!

4 comments:

  1. ಒಲುಮೆಯಲ್ಲಿ ತಾಳ್ಮೆಯ ಪರೀಕ್ಷೆ ಹೆಚ್ಚು.

    ReplyDelete

  2. ಒಲವು, ಚೆಲುವು, ಮಿಂಚು, ಗುಡುಗು ಎಲ್ಲವೂ ಅವಳು.
    ಮಳೆಯಾಗಿ ಸುರಿಯಬಲ್ಲಳು, ಹಗಲಾಗಿ ಉರಿಯಬಲ್ಲಳು.
    ಹಾಲು ಜೇನು ಬೇಗ ಸೇರಲಿ
    ಚೆನ್ನಾಗಿದೆ
    ಸ್ವರ್ಣಾ

    ReplyDelete
  3. ಸ್ವರ್ಣಾ ಅವರು ಹೇಳಿದರಲ್ಲ! ಅವರ ಆಶಯವೇ ನನ್ನದೂ!

    ReplyDelete