ನಿಲುವನೋ ಮನದೊಳಗೆ ಹರ-ತಾ
ಗೆಲುವನೋ ಜಗದೊಲವನು
ಚೆಲುವೆ ಗಿರಿಜೆಯ ಮನವ ಕದ್ದವ
ಬಿಲ್ವಕೇ ನಮಗೊಲಿವನು!
ನಂದಿವಾಹನನೀತನನು ಆ-
ನಂದದಿಂದಲಿ ಭಜಿಸಲು
ಬಂದು ಕಳೆಯುವ ಮನದ ಕ್ಷೇಷವ
ಇಂದಿನಾ ದಿನ ಹಾಡಲು
ನಾದದುಂದುಭಿ ಮೊಳಗುವೆಡೆಯಲಿ
ಮೋದದಿಂದಲಿ ಕುಣಿವನು
ಕಾಯ್ದು ಕರುಣದಿ ಪೊರೆವನೈ-ಕ
ಲ್ಲಾದ ರೂಪದಿ ತೋರ್ಪನು.
ಶಿವನು ಚರ್ಮಾಂಬರನು ಸಕಲರ
ಭವದ ಬಂಧನ ಕಳೆಯುಲಿ
ಶಿವನ ನುತಿಸುತ ದಿನವ ಕಳೆಯಲು
ಭುವನ ಅನುದಿನ ಬೆಳಗಲಿ.
ಇಂತಹ ಭಕ್ತಿಭರಿತ ಗೀತೆಯನ್ನು ನೀವು ಬರೆಯಬಹುದು ಎಂದು ಅನಿಸಿರಲಿಲ್ಲ!
ReplyDeleteಪ್ರೇಮ ಕವಿಗಳು ಭಕ್ತಿ ಗೀತೆಯನ್ನು ಬರೆಯುತ್ತಾರೆ ..ಚೆನ್ನಾಗಿದೆ ಭಟ್ರೇ
ReplyDeleteEnna fav ishwarana hadu mastiddu anna :)
ReplyDelete