Tuesday, April 9, 2013

ಶಿವರಾತ್ರಿಯ ಹಾಡು.


ನಿಲುವನೋ ಮನದೊಳಗೆ ಹರ-ತಾ
ಗೆಲುವನೋ ಜಗದೊಲವನು
ಚೆಲುವೆ ಗಿರಿಜೆಯ ಮನವ ಕದ್ದವ
ಬಿಲ್ವಕೇ ನಮಗೊಲಿವನು!

ನಂದಿವಾಹನನೀತನನು ಆ-
ನಂದದಿಂದಲಿ ಭಜಿಸಲು
ಬಂದು ಕಳೆಯುವ ಮನದ ಕ್ಷೇಷವ
ಇಂದಿನಾ ದಿನ ಹಾಡಲು

ನಾದದುಂದುಭಿ ಮೊಳಗುವೆಡೆಯಲಿ
ಮೋದದಿಂದಲಿ ಕುಣಿವನು
ಕಾಯ್ದು ಕರುಣದಿ ಪೊರೆವನೈ-ಕ
ಲ್ಲಾದ ರೂಪದಿ ತೋರ್ಪನು.

ಶಿವನು ಚರ್ಮಾಂಬರನು ಸಕಲರ
ಭವದ ಬಂಧನ ಕಳೆಯುಲಿ
ಶಿವನ ನುತಿಸುತ ದಿನವ ಕಳೆಯಲು
ಭುವನ ಅನುದಿನ ಬೆಳಗಲಿ.

3 comments:

  1. ಇಂತಹ ಭಕ್ತಿಭರಿತ ಗೀತೆಯನ್ನು ನೀವು ಬರೆಯಬಹುದು ಎಂದು ಅನಿಸಿರಲಿಲ್ಲ!

    ReplyDelete
  2. ಪ್ರೇಮ ಕವಿಗಳು ಭಕ್ತಿ ಗೀತೆಯನ್ನು ಬರೆಯುತ್ತಾರೆ ..ಚೆನ್ನಾಗಿದೆ ಭಟ್ರೇ

    ReplyDelete
  3. Enna fav ishwarana hadu mastiddu anna :)

    ReplyDelete