ಏಕಾಂತವನು ಹುಡುಕಿ
ಅವಳ ಮುಂಗುರುಳ ನೇವರಿಸಿ
ಗಲ್ಲವ ಹಿಡಿದು
ಮುತ್ತನೊತ್ತುವ ಸಮಯದೊಳು
ನೀ ರಿಂಗಣಿಸದಿರು ಮೊಬೈಲೇ !
ಏಕಾಂತವಿದ್ದರೂ ಅದು ಜೈಲೇ !!
ನರುಗಂಪಿನ ಅವಳ ತುಟಿಗಳು
ನನ್ನ ಮೋರೆಯನ್ನಪ್ಪಿ ಚುಂಬಿಸೆ
ಅದುರುತ್ತಿರುವ ವೇಳೆ
ನೀ ಕಾಡಬೇಡ ಕ್ಯಾಮೆರದ ಕಣ್ಣೆ
ಅವಳ ಮತ್ತೆ ನನ್ನ ಚಿತ್ರವ
ಹಳೆತಾಗಿಸಿ ಉಪ್ಪಿನಕಾಯಿ ಹಾಕಬೇಕಾಗಿಲ್ಲ !
ದೂರದ ದರ್ಶನ ಮಾಟ !
ಸಮಯಕ್ಕೂ ಸರಸಕ್ಕೂ ಬೇಟ
ಜಗಳ,ವಾರ್ತೆ, ಆಟಗಳ ನೋಡಿ
ನಾಳೆಯ ಚಿಂತೆಗಳ ದೂಡಿ
ನಿರ್ಭಂದಿಸಿದ ಗಳಿಗೆಯೊಳು ಇಷ್ಟೇ
ಎಂದೆನುತನುಭವಿಸಬೇಕು !
ಇಲ್ಲವಾದರೆ ನೆಮ್ಮದಿಯ ನಾಳೆ ಇಲ್ಲ?
ಸರಸಕ್ಕೆ ಪೀಡೆಗಳಂತಹ ಆಧುನಿಕ ಮಾನವ ಪರಿಕರಗಳನ್ನು ಸರಿಯಾಗಿ ಉಗಿದು ಉಪ್ಪಿನಕಾಯಿ ಹಾಕಿದ್ದೀರಿ.
ReplyDeleteದೇವರೇ, ಭಟ್ಟರ ಆ ರಸಗಳಿಗೆಯಲ್ಲಿ ಯಾವುದೇ ತೊಂದರೆ - ಹಿಂಸೆ - ತಾಪತ್ರಯಗಳಾಗದಿರಲಿ.....!!!!
ತುಂಬ romantic ಆಗ್ತಿದೀರಿ,ಭಟ್ಟರೆ. Of course ನಿಮ್ಮ ವಯಸ್ಸೇ ಅಂಥಾದ್ದಲ್ವ!
ReplyDeleteI liked 1st para much.... :)
ReplyDeleteಅವಳ ಮತ್ತೆ ನನ್ನ ಚಿತ್ರವ
ReplyDeleteಹಳೆತಾಗಿಸಿ ಉಪ್ಪಿನಕಾಯಿ ಹಾಕಬೇಕಾಗಿಲ್ಲ !
ಚೆನ್ನಾಗಿದೆ :)
supero superu .. nimma rasikatanake namo namaha :-)
ReplyDelete