Tuesday, April 17, 2012

ಪ್ರೀತಿ ಎಂದರೇನೆ ಸಖಿ ?

ಗುರುತಿಲ್ಲದ ಹೂಗಳಾಯ್ದು
ಸರತಿಯಲ್ಲೆ ಪೋಣಿಸುತ್ತ
ಧರಿಪ ಮಾಲೆಯೆನ್ನುವುದು !
ಪ್ರೀತಿ ಎಂದರೇನೆ ಸಖಿ ?

ಮಳೆಗೆಜ್ಜೆಯ ತಾಳದಲ್ಲಿ
ಹಳೆಯ ಕೊಳೆಯ ತೊಳೆಯುತಿಂತು
ಸುಳಿವ ನವೋತ್ಸಾಹ ಸೊಗಸೆ !
ಪ್ರೀತಿ ಎಂದರೇನೆ ಸಖಿ ?

ನನಗೆ ನೀನು ಕಾಯುವುದು
ನಿನ್ನ ನೆನೆದು ಬೇಯುವುದು
ಕನಸು ನನಸು ನೋವು ನಲಿವು !
ಪ್ರೀತಿ ಎಂದರೇನೆ ಸಖಿ ?

5 comments:

  1. ಅನುರಾಧ.April 17, 2012 at 9:50 AM

    ಪ್ರೀತಿಯೆಂದರೇನೆ ಸಖಿ...? ತುಂಬಾ ಸೊಗಸಾದ ಕವನ...:) ಖುಷಿ ಕೊಟ್ಟಿತು...!

    ReplyDelete
  2. ಇಲ್ಲಿಯ ಒಂದು ಉಪಮೆ ಬಹಳ ಖುಶಿ ಆಯಿತು.ಪಕ್ಕನೇ ಜೇಬಿಗಿಳಿಸಿಬಿಡುತ್ತೇನೆ.ಪ್ರಕೃತ್ತಿಯ ನವ ನವೀನ ಭಾಷ್ಯಗಳಿಗೆ ಹುಡುಕಾಡುವುದೇ ಹೊಸತನದ ನೋಟ.
    ಇದುವರೆಗೆ ಇಂತಹ ಪ್ರಕೃತ್ತಿಯ ನಿನಾಧವನ್ನು ಆಲಿಸಿರಲೇ ಇಲ್ಲ. ಆಹಾ..!
    " ಮಳೆಗೆಜ್ಜೆಯ ತಾಳದಲಿ" ಮೈ ಜುಮ್ಮೆನಿಸುವ ಭಾವ ಲಯ. ಈ ಒಂದು ಭಾವ ಸೃಷ್ಠಿಗೆ ನಮೋ ನಮಃ..

    ReplyDelete
  3. ಭಟ್ಟರೆ,
    ಸೊಗಸಾದ, ಸುರಾಗವಾದ ಪ್ರೇಮಗೀತೆಗಳನ್ನು ಹೊಸೆಯುತ್ತ ಸಾಗಿರುವಿರಿ. ಅಭಿನಂದನೆಗಳು.

    ReplyDelete
  4. ಸುಂದರ ಸಾಲುಗಳು
    ಅದರಲ್ಲೂ ಮೊದಲ ೩ ಸಾಲುಗಳು ತುಂಬಾ ಇಷ್ಟ ಆಯ್ತು

    ReplyDelete