Saturday, October 20, 2012

ಹೊಸ ಹುಟ್ಟು.


ಬಾಗಿಲು ತೆರೆದ ದನಿ ಕೇಳಿಸಿತು
ಒಳನಡೆದೆ, ಹಿತದ ಕತ್ತಲು
ಕೇಳಿದೆ; ಯಾರಿಲ್ಲಿ?

ಬಾ ಮಗನೇ ಬಾ, ನೋಡು
ಇದು ಕಂಬ, ಇದು ಮಾಡು,
ಇದು ನನ್ನ ಗೂಡು.

ಒಳಗಿದೆಯೊ ಒಂದಿಷ್ಟು ಹಳೆಯ ಮಡಕೆಯ ಚೂರು!
ಆರಿಲ್ಲವಿನ್ನೂ ನೆತ್ತರು. ಪುನಃ ಇಹುದೆ ಚಿಗುರು?
-
ಹೊರಗೆ ಮಳೆಯಾದಂತೆ ಸದ್ದು,
ಹನಿ ಬಿದ್ದರೆ ಸಾಕು, ಜಗ್ಗನೇಳುವ ಬೀಜ
ಇನ್ನೇನು ಕಳವಳಿಕೆ?
ಹೊರಗೆ ಬಂದೆ.
ನಾಳೆ ಬಂದೀತೆಂದು ಹೊಸತು ಮೊಳಕೆ!

3 comments:

  1. ನಾಳೆ ಸದಾ ಜೀವಂತವಿರುವ ಮೊಳಕೆ.
    "ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ "
    ಚೆನ್ನಾಗಿದೆ ಭಟ್ರೇ.
    ಸ್ವರ್ಣಾ

    ReplyDelete
  2. ಬದುಕಿನ ಆಶಯಗಳು ಚೈತನ್ಯ ಪೂರ್ಣವಾದಾಗ ಮೊಳಕೆ ಸಿದ್ಧಿಯೂ ಶತಸಿದ್ಧ. ಒಳ್ಳೆಯ ಕವನ.

    ReplyDelete
  3. ತುಂಬ ಒಳ್ಳೆಯ ಕವನ, ಭಟ್ಟರೆ.

    ReplyDelete