Thursday, September 3, 2009

ಹಾಯ್ಕುಗಳು

೧
ರೆಪ್ಪೆ ಬಾಗಿಲು ತೆರೆದು ಕಾಯುತ್ತಿದ್ದೇನೆ
ಕಣ್ಣಲಿ ತುಂಬಲು ಪ್ರೀತಿಯ ಹೆಣ್ಣನು !
೨
ನನ್ನ ಕಣ್ಣಿನ ಕೆರೆಯಲ್ಲಿ ತಾವರೆ ಅರಳಿ ನಿಂತಿದೆ
ಕಿರಣವಾಗಿ ಅವಳು ಬಂದಿದ್ದಳು
೩
ಖಂಡಿತ ಇದು ಕಣ್ನೀರಲ್ಲ ಆನಂದಭಾಷ್ಪವೂ ಅಲ್ಲ
ಹರಿಯುತ್ತಿದ್ದಾಳೆ ಅವಳು ಪ್ರೀತಿಯಾಗಿ.