ಕಿರಣ ಡೈರಿ

ಜನವರಿ ೧. 2011

ಅಬ್ಬಾ ತುಂಬಾ ವರ್ಷಗಳಿಂದ ಬರೆಯಬೇಕು ಅಂದುಕೊಂಡಿದ್ದಕ್ಕೆ , ಈಗಲಾದರೂ ಬರೆಯುವ. ಎನೆಲ್ಲ್ಲಾ ಬರೀಬೇಕು ಅನ್ನೋದೆ ಗೊತ್ತಾಗ್ತಿಲ್ಲ.
>ಹೊಸ ವರ್ಷ ಇವತ್ತು. ಮನಸ್ಸಿನೊಳಗೆ ಆಶೆ ಇದ್ದರೂ ಈ ರೀತಿಯ ಇಂಗ್ಲೀಶು ಆಚರಣೆ ಬೇದ ಅಂದು ಸುಮ್ಮನಿದ್ದೆ.
>ಸ್ಯಾಲರಿ ಹಾಕಿಲ್ಲ. ಬ್ಯಾಂಕಿಗೂ ರಜೆ ಇದೆಯಾ ? ಗೊತ್ತಿಲ್ಲ.
>ಓಹ್ ಸಿಗರೇಟು ಕಡಿಮೆ ಮಾಡಬೇಕು ಅಂದುಕೊಂದಿದ್ದೇನೆ. ಮರೆತೇ ಹೋಯ್ತು. ನಾಳೆಯಿಂದ ಬರೀ ೪ ಸಾಕು.
>ಮನೆಗೆ ಹಣ ಕಳುಹಿಸಬೇಕು ಅಂದುಕೊಂದಿದ್ದೆ.

ನಾಳೆ ಆಫೀಸ್ ಇದೆ. ಹೋಗುವಾಗ ಅದೇ ದಾರಿಯಲ್ಲಿ ಹೋಗಬೇಕು. ಯಾಕೆ ಧೈರ್ಯ ಇಲ್ಲ ಅಂತ ನೋಡಬೇಕು.
ಒಂದು ಕವನ ಬರೆದೆ.ಅವಳಿಗೆ ಮೈಲ್ ಮಾಡಿದ್ದೇನೆ ಆದರೆ ಪ್ರತಿಕ್ರಿಯೆ ಇಲ್ಲ , ಬೇಜಾರು.

ಒಂದು ಪುಟ ಇಷ್ಟೇನಾ.. ನಾಳೆಯಿಂದ ಇದನ್ನೆಲ್ಲ ಬರೆಯಬಾರದು.. ಇಷ್ಟು ಹೊತ್ತು ಆಲೋಚಿಸಿ ಬರೆಯುವುದು ಏನಕ್ಕೆ ? ಆದರೆ ಏನೋ ಒಂದು ಅವ್ಯಕ್ತ ಖುಶಿ ಇದೆ.


ಜನವರಿ ೨

ಮಾಮೂಲಿ.. ಹಳೇ ವರ್ಷದ ಚಾಳಿ.೭ ಗಂಟೆಗೆ ಎದ್ದೆ.
>ಶೇವಿಂಗ್ ಮಾಡಿದ್ದು ಬರೆಯಬೇಕೆ ? ಗೊತ್ತಿಲ್ಲ. ಖಂಡಿತ ಬೆಳಗ್ಗಿನ ತಿಂಡಿ ಚೆನ್ನಾಗಿರಲಿಲ್ಲ !ಬಸ್ಸಲ್ಲಿ ಒಳ್ಳೆ ಜಗಳ, ದಾರಿ ಸರಿದದ್ದೂ ಗೊತ್ತಾಗಿಲ್ಲ.
>ಈ ವರ್ಷದ ಮೊದಲ ಕೆಲಸ. ಪೂರ್ತಿ ಮುಗಿಸಬೇಕು ಎನ್ನುವ ನಿರ್ಧಾರ ಬರುತ್ತಾ ಮುಗಿಸಿದರೆ ಸಾಕು ಅನ್ನಿಸಿತು !
> ಒಳ್ಳೆ ಮೆಸ್ ಊಟ! ಆಂಟಿ ನಮ್ಮನ್ನು ನೋಡದಿರುವಾಗ ನಾವು ಆಂಟಿಯನ್ನು ನೋಡಿದ್ದೇ ಊಟ ರುಚಿಸಲು ಕಾರಣ ಅನ್ನೋದೇ ನನ್ನ ಅಭಿಪ್ರಾಯ (ನನ್ನ ಪ್ರಾಯ ಕೂಡ)
>ಇವತ್ತಾದರೂ ಬೇಗ ಮನೆಗೆ ಹೋಗಬೇಕು ಅನ್ನುವ ನಿರ್ಧಾರಕ್ಕೆ ಪ್ರಶಾಂತ್ (ಸಹೋದ್ಯೋಗಿ) ಕಲ್ಲು ಹಾಕಿದ. ಖಂಡಿತ ಈ ಬಾರಿ ಅವನನ್ನ ಕ್ಷಮಿಸಲ್ಲ !
>ರೀಚಾರ್ಜ್ ಮಾಡಿದೆ. sms ಕಡಿಮೆ ಮಾಡಬೇಕು. ಓಹ್ ಇವತ್ತು ಅವಳ ಹತ್ತಿರ ಮಾತಾಡಬಹುದಿತ್ತು. ಬೇಡ ಹೀಗೆ ಸುಮ್ಮನೆ ಇರೋಣ.
>ಕವನ ಬರೆಯೋದೆ ಬೇಡ ಅನ್ನಿಸಿದೆ.
>ಮನೆಗೆ ಹಣ ಕಳುಹಿಸಿದೆ, ಅವರಿಗೆ ನೆಮ್ಮದಿ ಮುಖ್ಯ.. ಇನ್ನು ನೋಡಿ ಖರ್ಚು ಮಾಡಬೇಕು.
>ಒಂಭತ್ತುವರೆಗೆ ಮನೆಗೆ.! ಊಟಕ್ಕೆ ಹೊಸರುಚಿ. ಉಪ್ಪು ಕಡಿಮೆ , ಬೇಡವಿತ್ತು ಮಾಡೋದು.
>ಈಗ ಮಲಗಬೇಕು. ಏನೋ ಬರೆಯೋದು ಉಳಿಸಿದ್ದೇನೆ ..ಉಹುಂ ನೆನಪಾಗ್ತಾ ಇಲ್ಲ ..