Monday, July 12, 2010

ನೀನು ದೂರಾದಾಗ ನಾನೇನು ಅಳುತಿಲ್ಲ !!

ನೀನು ದೂರಾದಾಗ ನಾನೇನು ಅಳುತಿಲ್ಲ
ಹೆಪ್ಪುಗಟ್ಟಿದೆಯಿಲ್ಲಿ ಕಣ್ಣ ನೀರು 
ಮತ್ತೆ ಜಾರಿದೆ ಧರೆಗೆ ನಳನಳಿಸುತಿಹ ಮರವು 
ಕಡಿದೆಯಲ್ಲೇ ಅದರ ತಾಯಿಬೇರು 


ಅಂದು ನೀ ಬಂದಾಗ ಬಂಧಗಳ ಬೆಸೆದಾಗ 
ನನ್ನ ನೋವಿನ ಗಿಡಕೆ ಪ್ರೀತಿ ಹೂವು 
ಎಲ್ಲೋ ಮರುಗಿದ ದನಿಯು ನಿನ್ನ ಸಾಮೀಪ್ಯದಲಿ 
ಗಾನವಾಯಿತು ಮರೆತು ಎಲ್ಲ ನೋವು 


ಸಾಯಲಾರದೆ ನೆನಪು ; ಮತ್ತೆ ಮರುಕಳಿಸುವುದು 
ಕಾಡುವುದು ಎಲ್ಲ ಕಡೆ ನಿನ್ನ ನೆನೆದು 
ಮರೆಯಲಾರದೆ ನಿನ್ನ ಸೇರಲಾರದೆ ನಿನ್ನ 
ಹೇಳಲಾರೆನು ಮನಕೆ ; ಮಾತೆ ಬರದು 


ನೀ ಕೊಟ್ಟ ಸ್ನೇಹವನು ಇಟ್ಟಿರುವೆ ಎದೆಯೊಳಗೆ 
ಕಾಯುತಿಹೆ ನಾನದನು ಹಿಂದೆ ಕೊಡಲು 
ನೀನದನು ಪಡೆದುಕೋ ಮತ್ತೆ ಹೋದರು ಸರಿಯೇ 
ಸ್ವೀಕರಿಸಲೇಬೇಕು ; ನಾನು ಮತ್ತೆ ನಗಲು 


ಕೆ ಈಶ್ವರ ಕಿರಣ 
೧೬.೦೮.೨೦೦೫ 

2 comments:

Anitha Naresh Manchi said...

ಮತ್ತೆ ಜಾರಿದೆ ಧರೆಗೆ ನಳನಳಿಸುತಿಹ ಮರವು
ಕಡಿದೆಯಲ್ಲೇ ಅದರ ತಾಯಿಬೇರು

touching lines....

ಪ್ರಸನ್ನ ಪುತ್ತೂರು said...

ಶಬ್ದಗಳನ್ನು ತುಂಬ ಚೆನ್ನಾಗಿ ಬಳಸಿಕೊಂಡಿದ್ದೀರಿ.....ಭಾವನೆಗಳು ತುಂಬ ಹಿಂಸೆ ಕೊಡುತ್ತದೆ ಅಲ್ಲವೆ ...