ಹಸೆ ಹತ್ತಿ, ಕತ್ತೆತ್ತಿ..ಫಲ ಉಡುವ ಸಿರಿಯೆತ್ತಿ
ಹಣ್ಣಾಗಿ ,ಕೊನೆಗೆ ಮಣ್ಣಾಗಿ,
ಬಂಗಾರ ಬಾಳ್ ನಿಂದು , ಸಿಂಗಾರ ತಾಯೇ ..
ಅಗೆದಗೆದು ಉತ್ತೆ ನಾ ಪಡೆಯೆ ನಿನ್ನ ಫಲ,
ಮಣ್ಣೊಲವ ಮರೆತರೂ ಬಿಡದೆ ನಿನ್ನಯ ಬೆನ್ನು ,
ಗರಿಕೆಯಂತಿದ್ದ ನೀನ್ , ಚಿಮ್ಮಿದಾ ಪರಿ ಏನು ?
ಬರಿ ಬೆಡಗು ನನಗಿನ್ನು; ಕುಬ್ಜ ನಾನು !!
ವರುಷ ಎಷ್ಟಾಯ್ತೆಂದು ಯಾರು ಕೇಳಿದರಿಲ್ಲ ,
ನನಗೋ ದಿನವೆಷ್ಟೆಂದು ಕೇಳುವರು ಎಲ್ಲಾ!
ಅಪರೂಪಕ್ಕೋ ಏನೋ ನಮ್ಮಲ್ಲೂ ಒಬ್ಬ ನಿನ್ನಂತೆ!
ಬಾಹುಬಲಿಯಾದನವ; ನಾವ್ ಮಾತ್ರ ಬೆತ್ತಲೆ !
ನಿನ್ನ ಫಲ ಕೈಯಲ್ಲಿ , ನಾವು ಕತ್ತರಿಯಲ್ಲಿ !
ಉತ್ತರಿಸದಿಹ ಪ್ರಶ್ನೆ ಇನ್ನು ನೂರಾರು !
ನೋಡೋಣ ಮುಂದೆ ; ಈಗ ಬಣ್ಣದ ಲೋಕ
ಕತ್ತಲಾದಂತೆ ಎಲ್ಲವೂ ಕಪ್ಪೇ !!
ಈಶ್ವರ ಭಟ್ "ಕಿರಣ"
೧೩/೦೧/೨೦೧೧
2 comments:
ಭಾವ ಪಕ್ವತೆ ಚೆಂದ ಬಂದಿದೆ ಮಾನ್ಯ ಈಶ್ವರರೆ.ಕಾಣುವ ಸಾಮಾನ್ಯದಲ್ಲಿ ಅಸಾಧಾರಣಾ ಒಳನೋಟ ನಿಮ್ಮದು.ಅದಕ್ಕೆ ಧ್ಯಾನ ಅಗತ್ಯ. ಅದು ಇಲ್ಲಿ ನಾನು ಕಾಣುತ್ತೇನೆ. ಅಭಿನಂದನೆಗಳು.
nimma kavyada adake mara baanu muttuvashtettarake beleyali :):)
Tumbaa chennagide Kiran.
Post a Comment