ಮಗನೆ,
ಬಿಲ್ಲು ಕಲಿಯುವ ಚಟವೋ
ಏನದು ದೊಡ್ಡ ಮಾಟ,
ಅಲ್ಲಿ ಬ್ರಾಹ್ಮಣರು ಹೇಳಿಕೊಟ್ಟದ್ದಕ್ಕೆ !
ಭೂಭುಜರು ಮಾರಾಮಾರಿ ಕಾದಿ
ಕಾರಿದ ನೆತ್ತರೆ ಸಾಕ್ಷಿ.
ಹೌದು ಮಗೂ.
ಬ್ರಾಹ್ಮಣರು ಹೇಳಿಕೊಡಬಹುದಂತೆ !
ಉಪಯೋಗಿಸುವಂತಿಲ್ಲ,
ಹಾಗೇ ಕ್ಷತ್ರಿಯರೂ !
ಬಳಸಬಹುದು ! ಭೋಧನೆ ನಿಶಿದ್ಧ.
ಕೇಳು,
ನಾನಂತೂ ಸೂತ ಮಗು!
ಅಪ್ಪ ಬ್ರಾಹ್ಮಣನೋ ಕ್ಷತ್ರಿಯನೋ ?
ಬಿಲ್ಲೋಜರ ನಡುವೆ ರಥ ಓಡಿಸುವುದು
ಬಿಲ್ಲುವಿದ್ಯೆಗಿಂತ ಗೆಲ್ಲುವ ವಿದ್ಯೆ!
ನಿನ್ನಬ್ಬೆ ಯಾರು ಮಗು ?
ಗಂಗೆಯೇ , ಅಲ್ಲ ಮಬ್ಬುಕತ್ತಲಿನಾಟಕ್ಕೆ
ಹೊಕ್ಕಳ ಬಳ್ಳಿ ಕತ್ತರಿಸಿದ ಮತ್ತೊಬ್ಬಳಿಹಳೇ.?
ನಿನ್ನ ಯೋಗಕ್ಕೆ, ಒಬ್ಬ!
ಬೆನ್ನುತಗ್ಗಿರುವ ಪರಶುರಾಮನಿದ್ದಾನೆ .
ಕಲಿಕೆ ನಿನ್ನ ಪ್ರಾಣ ....
.....ತೆಗೆಯದಿರಲಿ !
೦೭-೧೦-೧೧
13 comments:
ಉತ್ತಮ ಕಥನ ಕಾವ್ಯ. ಮಹಾಭಾರತದ ಸಮರ್ಥ ಬಳಕೆ. ಭೇಷ್ ಭೇಷ್!
1. ಕಲಿಸುವ ಮತ್ತು ಕಲಿಯುವ ವರ್ಗಗಳ ಮನುಧರ್ಮ ಅನುಸರಿಸಲು ಅನರ್ಹ ಎನ್ನುವುದು ನನ್ನ ಭಾವನೆ. ಏಕಲವ್ಯ ಇಂತಹ ಅಮಾನವೀಯತೆಗೆ ಸಾಕ್ಷಿ.
2. ಕಲಿಕೆ ನಿನ್ನ ಪ್ರಾಣ.....
....ತೆಗೆಯದಿರಲಿ!
ಸಾವಿರ ಅರ್ಥಗಳನ್ನು ಸ್ಪುರಿಸೋ ಸಾಲುಗಳು.
Very nice Bhatre !!! especially last 2 line...ಕಲಿಕೆ ನಿನ್ನ ಪ್ರಾಣ.....
....ತೆಗೆಯದಿರಲಿ..
u have a very good creativity in taking various concepts for your poems... keep writing..
ಭರ್ಜರಿ ಕವನ.ಮಹಾಭಾರತ ಗೊತ್ತಿರಕು ಹೇಳದೆ ಸಮಸ್ಯೆ ;)
ಮಹಾಭಾರತದ ಅತ್ಯಂತ ಧೀಮಂತ ಪಾತ್ರದ ಉತ್ತಮ ಸಂವಾದ :)
ಅಪುತ್ರನಿಗೆ ತಂದೆ ಇನ್ನೆಷ್ಟು ತಾನೇ ಹೇಳಿಕೊಡಬಲ್ಲ!!
ಪುತ್ರನಿರುವಿಕೆಯನ್ನೇ ಮರೆತ ಕಾಲದಲ್ಲಿ!
- ಚೆನ್ನಾಗಿದೆ... :)
ಕರ್ಣನ ಕಲಿಕಾ ವೃತ್ತಾ೦ತದ ಮೂಲಕ ಆ ಕಾಲಘಟ್ಟದ ಚಿತ್ರಣವನ್ನು ಸಮರ್ಥವಾಗಿ ಕವನಿಸಿದ್ದೀರಿ. ಅಭಿನಂದನೆಗಳು.
ಈಶ್ವರಣ್ಣ.... ಚೆನ್ನಾಗಿದೆ ಕವಿತೆ. ಒಂದಕ್ಕೊಂದು ಬೆಸೆದುಕೊಳ್ಳುವ ಲಯಬದ್ಧ ಅರ್ಥಕೋಶಗಳು,ಕಾವ್ಯದ ತಂಪು ಮನಸ್ಸನ್ನು ತಣಿಸಿತು. ಅಭಿನಂದನೆಗಳು.
chennagi bareetheeri.....ishta aaythu
arthasamruddhavaada
sogasaada kaviteyaagisiddiri.
abhinandanegalu.
very nicely written.
ಈಶ್ವರ್ ಸರ್ ಬಹಳ ಅರ್ಥಪೂರ್ಣ ಮತ್ತು ವಾಸ್ತವತೆ ನಿಮ್ಮ ಕವನದಲ್ಲಿ ಬಿಂಬಿತವಾಗಿದೆ..
ಯಾವ ವಿದ್ಯೆಯಾದರೇನು? ಗೆಲ್ಲುವ ವಿದ್ಯೆ ಮೇಲೆನ್ನುವ ಕವಿಯ ಚಮತ್ಕಾರದ ನುಡಿ ಇಷ್ಟವಾಯಿತು.ಗೆಲ್ಲುವ ವಿದ್ಯೆಯ ಮುಂದೆ ಎಲ್ಲಾ ವಾದಗಳೂ ಸೋತು ಹೋಗಲಿ.ಭಾವಗಳು ಕಿರಣವಾಗಿ ಪಸರಿಸಿ ಒಂದು ತಾತ್ವಿಕ ವಿಚಾರದ ಜಾಗೃತಿಯ ಸಂದೇಶ ನೀಡಿರುವ ಕವನ ತುಂಬಾ ಇಷ್ಟವಾಗುವುದು.
ಚುಚ್ಚುವ ವ್ಯಂಗ್ಯದ ಜೊತೆ ನಾಟುವ ನೋವೂ ಸೇರಿದ ಸೂತಸುತನ ಮನದ ಧ್ವನಿ ನಿಮ್ಮ ಶಬ್ಧಗಳಲ್ಲಿ ಪಕ್ವವಾಗಿ ಅಳವಡಿಸಲ್ಪಟ್ಟಿದೆ... ಇಷ್ಟ ಆಯ್ತು.
Post a Comment