ಅಪ್ಪನೋಡಿದ ಆಕಾಶಕ್ಕೆ ಬಿಳೆದ ಬಿದಿರಿನ ಮಹಲು
ಕುಡುಗೋಲನ್ನಿಕ್ಕಿ ಒಂದೊಂದೇ ಎಳೆದ
ಅವಧಿ ಮೀರಿದ ದುಡಿತ,
ಕೊನೆಗಾಯ್ತು ಬುಟ್ಟಿ ಮತ್ತೆ ನಿಚ್ಚಣಿಕೆ !
ಹೊಟ್ಟೆಗೆ ಹಿಟ್ಟಿನ ಪೂರಯಿಕೆ !
ಅಮ್ಮ ಅದೇ ಬಿದಿರ ಕೊಳವೆಯಿಂದ
ಊದಿದಳು ಒಲೆಯ, ಬೆಂಕಿ ಬಿದಿರ ಪುಳ್ಳೆಗೆ!
ಏನೋ ಬೇಯುವುದು
ಏನೋ ಸುಡುವುದು
ಅಮ್ಮಂದಿರಿಂದ ಸಾಧ್ಯವೆಂದೇ ,
ಅಲ್ಲ. ಬಿದಿರ ಬಳಕೆ.
ಮಗ ಇನ್ನೊಂದು ಭಾವುಕ ಜೀವಿ
ತನ್ನಂತೆಯೇ ಉಸಿರಾಡುವ ಮರದ ಬುಡ ಕಡಿಯಲಾರ !
ಕೈ ಕಾಲು ಕತ್ತರಿಸಿದ,
ಮೋಹನ ಮುರಳಿಯ ವಯಸು ನೆನಪಿಸಿ
ತೂತು ಕೊರೆದ , ಕೊಳಲಂತೆ ಅದು !
ಮಂದಾನಿಲದ ನಡುವೆ ಬಿದಿರ ಶಬ್ದ ಈಗ.
ಮೊಮ್ಮಗನೂ ಅದೇ ಹಾದಿ,
ಉಳಿದ ಬಿದಿರಿನ ಮೆಳೆಗೆ ಕಟ್ಟೆ ಕಟ್ಟಬೇಕಂತೆ!
ಪುಟ್ಟನಾಗಿರುವಷ್ಟು ಬಿದಿರು ಬೆಳೆದೀತು !
(ಪ್ರೇರಣೆ, ಹೃದಯ ಶಿವರವರು ಬಿದಿರು ಎಂದು ಒಂದು ಸಣ್ಣ ಕವನ ಬರೆದಿದ್ದರು .)
3 comments:
ಕವನ ಚೆನ್ನಾಗಿದೆ ಅಭಿನ೦ದನೆಗಳು. ಹೃದಯ ಶಿವರವರ `ಬಿದಿರು' ಕವನವನ್ನೂ ಪ್ರಕಟಿಸಿದ್ದರೆ ಓದಬಹುದಿತ್ತು. ನನ್ನ ಬ್ಲಾಗ್ ಗೆ ಭೇಟಿ ಕೊಡಿ.
ಗದ್ಯಕ್ಕೊಪ್ಪುವ ವಿಚಾರವನ್ನು ಜೋಪಾನವಾಗಿ, ಲಯಬದ್ಧವಾಗಿ ಹೀಗೆ ಕವಿತೆಗೆ ಒಗ್ಗಿಸಿಕೊಳ್ಳಬೇಕು. ಬಿದಿರಿನೊಂದಿಗೆ ಪದಗಳು ಆಟವಾಡಿದ್ದು ತುಂಬಾ ಇಷ್ಟವಾಯಿತು. ಚೆನ್ನಾಗಿದೆ ಕಿರಣ್ ಸರ್....
ಬಿದುರು ತಲಮಾರಿನಿಂದ ತಲೆಮಾರಿಗೆ ಬದಲಾದ ದೃಷ್ಠಿ ಕೋನಕೆ ಪ್ರತಿಮೆಯಂತೆ ಸಮರ್ಥವಾಗಿ ಬಳಸಿದ್ದೀರ. ಉತ್ತಮ ನೀತಿ ಪಾಠದ ಕವಿತೆ.
ಪ್ರೇರಣೆ ಪಡೆದ ಸಣ್ಣ ಕಥೆ ಮತ್ತು ಕಥೆಗಾರನನ್ನೂ ನೆನಸಿ, ನಿಮ್ಮ ಪ್ರಾಮಾಣಿಕತೆಯನ್ನು ದಾಖಲಿಸಿದ್ದೀರ.
Post a Comment