Sunday, January 8, 2012

ಹೀಗೊಂದು ಸ್ವಗತ :-


೧. 
ಅಪ್ಪ ನೆಟ್ಟಾಲದ ಮರವ ಹುಡುಕುತ್ತಿದ್ದೆ
ಕೊನೆಗೆ ಟ್ರಂಕಿನ ಮೂಲೆಯಲ್ಲಿದ್ದ 
ಹತ್ತುಪೈಸೆಯ ನಾಣ್ಯ ಸಿಕ್ಕಿತು.


೨.
ಅಮ್ಮನ ಮಡಿಲಮೇಲೊರಗುವುದು ಖುಷಿ,
ಹರಳೆಣ್ಣೆ ನೀಗುವುದೇ ಕಾಲ ನೋವ ?


೩.
ಮಳೆಹನಿ ಸೋಕದೆ ಬಿತ್ತಕ್ಕೆ ಹುಟ್ಟಿಲ್ಲವೇ ?
ಇದೆ,
ಅವಳ ಕಣ್ಣೀರು ಬಿದ್ದಾಗ ಹೀಗೊಂದು ಹುಟ್ಟು !

4 comments:

ಪ್ರತಾಪ್ ಬ್ರಹ್ಮಾವರ್ said...

ಕೊನೆಯ ಹಂತಕ್ಕೆ.. ಸಿಗುವಾ ಆಶಕಿರಣ... ಭರವಸೆಯ ಭಾವ ಬೆಳಕು...

ಸೀತಾರಾಮ. ಕೆ. / SITARAM.K said...

ವಿನೂತನವಾಗಿ ಗೀಚಿದ್ದಿರಾ...

Nivedita Hegde said...

ಮತ್ತೆ ಮತ್ತೆ ಓದಬೇಕೆನಿಸುವಷ್ಟು ಸು೦ದರಾ..

Naveen Naikap said...

ಗೀಚಿದ ಪದಗಳಲ್ಲಿ ಭಾವನಾತ್ಮಕ ಸಂಬಂದಗಳ ಸಾಹಿತ್ಯ ಉಸಿರಾಡುತಿದೆ ಎಂದೆನಿಸಿತು. ಹಾಗೇ ಬರೆಯುತ್ತಿರಿ.