ಒಂದು ಬಾರಿ ನಗುತ ಬಾರೆ ತೋಳ ತೆಕ್ಕೆಗೆ
ಮಂದ ಗಾಳಿ ನೀಡುತಿಹುದು ಸರಸಕೊಪ್ಪಿಗೆ
ಕರಗಿ ಹೋದ ಚಂದ್ರ ಕೂಡ ನಿನ್ನ ಲಜ್ಜೆಗೆ
ಸುರರು ನಾಚಿ ಕರುಬುತಿಹರು ನಿನ್ನ ಮುದ್ದಿಗೆ
ನಿನ್ನ ಮುತ್ತನೆತ್ತರಿಸೆ ಅವು ತಾರೆಯಾಯಿತೇ?
ನಿನ್ನ ದನಿಯ ಕೇಳೆ ಧರೆಯು ಮೂಕವಾಯಿತೇ?
ಮೇರೆ ಮೀರದೆಂದೂ ನನ್ನ ಸ್ವಾರ್ಥದಾ ಬಲ
ನೀರೆ ನಿನ್ನ ಸೇರೆ ಬಾಳೋ ಒಂದೇ ಹಂಬಲ
ಚೆಲುವು ಅಂದರೇನು ಅರಿಯೆ ಒಲವೆ ಚೆಲುವೆನೆ
ಗೆಲುವು ಸೋಲು ಪ್ರೀತಿಗಿಹುದೆ ಸೋತೆ ಸುಮ್ಮನೆ
6 comments:
ಕಿರಣ, ಭಾವನೆಗಳ ಮಿಳಿತ ಚೆನ್ನಾಗಿದ್ದು...ಸುಂದರ ಕವನ..
ಅಹಾಹಾಹಾ ... ವಾಹ್ ವಾಹ್... ಏನು ಸೊಗಸಾದಾಗ ಗೀತೆ.. ಅತೀ ಸುಂದರ ಈ ಪ್ರೇಮಕವಿತೆ... ಸರ್.. ಯಾರಿಗಾಗಿ ಈ ಹಾಡು.. ನಿಮ್ಮಾಕೆಯು ಈ ಕೂಗಿಗೆ ಕರಗಿ , ನಿಮ್ಮ ಬಳಿ ಬಂದಳೇ.. ??
ನಿಮಗೂ ಮತ್ತು ನಿಮ್ಮ ಪ್ರಿಯತಮೆಗೂ ಸಹ ಶುಭ ಕೋರುತ ..ಈ ಸುಮಧುರ ಗೀತೆಯ ರಚನೆಗೆ ಅಭಿನಂದನೆಗಳನ್ನು ತಿಳಿಸುತ್ತೇವೆ... :) :)
ಒಳ್ಳೆಯ ರಚನೆ. ಭಾವ ರಸಸ್ವಾದ ಸವಿದಂತಾಯ್ತು.
ವಾಹ್! ಚೆಲುವಾದ ಪ್ರೇಮಗೀತೆಗೆ ನಾವೇ ಮನಸೋತರೆ, ಈ ಕವನದ ನಾಯಕಿಯು ಸೋಲದಿರಳೆ?
sooooper Kinna :))
ಗೆಲುವು ಸೋಲು ಪ್ರೀತಿಗಿಹುದೆ ಸೋತೆ ಸುಮ್ಮನೆ
ಸೂಪರ್ ಕವನ :)
Post a Comment