Wednesday, March 14, 2012

ಕೊಳಲನೂದು ಮಾಧವಾ ರಾಧೆ ಬರುವಳು


ಕೊಳಲನೂದು ಮಾಧವಾ 
ರಾಧೆ ಬರುವಳು !
ನಿಲಲಾರಳು ದನಿಯ ಕೇಳಿ
ಬಂದೆ ಬರುವಳು !


ನೊಂದಿಹಳೆ ರಾಧೆ ಹೇಳು
ಮುನಿದು ಹೋದಳೇ
ಚಂದದಿಂದುಲಿವ ನುಡಿಗೆ
ಮರಳಿ ಬಾರಳೇ ?


ಪ್ರೇಮದುಸಿರ ಹರಿಸಿ ನೀನು
ನುಡಿಸೆ ಮುರಳಿಯಾ
ಸಾಮದೊಳು ಕರೆವುದದು
ನಿನ್ನ ರಾಧೆಯಾ


ಆ ನೆರಳೊಳು ನೋಡು ರಾಧೆ
ಮರಳಿ ನಿಂದಳೇ ?
ಜೇನು ದನಿಯ ಮುರಳಿ ಕರೆಗೆ
ಸಿರಿಯು ಬಾರಳೇ ?


೧೩-೦೩-೨೦೧೨

9 comments:

Banavasi Somashekhar.ಬನವಾಸಿ ಮಾತು said...

ಲಯ ತುಂಬಿದ ಸುಂದರ ರಾಗಾಲಾಪನೆ.ಗೇಯತೆಯು ಪಕ್ವಗೊಂಡು ಮುದ್ದಾಗಿ ಹರಿದಿದೆ.ಭಾವಲಹರಿಯು ಭಕ್ತಿಪರವಶಗೊಂಡಿದೆ.ಸುಂದರ ಕವಿತೆ.ಇಷ್ಟವಾಗುವುದು.ಅಭಿನಂದನೆಗಳು.

sunaath said...

ಮಧುರ ಭಾವಗೀತೆಗಳು ಮಾಯವಾಗುತ್ತಿರುವ ಈ ಕಾಲದಲ್ಲಿ, ನಿಮ್ಮ ಈ ಸುಂದರ ಕವನವು ಮನಕ್ಕೆ ಮುದಕೊಡುತ್ತಿದೆ.

Harisha - ಹರೀಶ said...

ಮಸ್ತ್ ಇದ್ದು :)

Badarinath Palavalli said...

ಸಿಹಿಯಾದ ಭಾವಗೀತೆ. ಮುರಳಿಯ ಕೊಳಲುಲಿ ಇಂಪಂತೆ ಮನಕೂ ತಂಪಾಯಿತು.

KiranP said...

ವಾವ್, ಮಸ್ತ್ ಇದ್ದು..

ಅನುಶ್ರೀ ಹೆಗಡೆ ಕಾನಗೋಡು. said...

nice

prashasti said...

ಚೆಂದ ಇದ್ದೋ :-)

Shubhashree Bhat said...

ಮಧುರಾನುಭೂತಿಯನ್ನೀಯುವ ಭಾವಪೂರ್ಣ ಕವನ.....

ಸಂಧ್ಯಾ ಶ್ರೀಧರ್ ಭಟ್ said...

chandiddu....