ನನ್ನವಳು ಕೈಹಿಡಿದ ಮಲ್ಲಿಗೆ ಬಳ್ಳಿ, ಹೆರಳೋ
ಕಾನನದ ಕತ್ತಲಿನಂತೆ, ಹುಬ್ಬೆರಡು ಸೋನೆ
ಚಿನ್ನದ ಮಳೆಗೆ ಮೂಡಿದ ಕಾಮನಬಿಲ್ಲು !
ಮುನ್ನಿನಾ ಮಾತುಗಳೆ ಕೋಗಿಲೆಯ ಕುಕಿಲು !
ಅವಳತ್ತಾಗ ಒಂದು ಹನಿ , ಅಲ್ಲೆ ಮೂಗನು
ಸವರಿ ನತ್ತಾಯಿತೇ? ಎಂದು ಕನವರಿಕೆ !
ಇವೆರಡು ಕಂಗಳ ನೋಟಕ್ಕೆ ಮನಕರಗಿ
ತವಕವೇನ್ ತುಟಿಯಂಚಿನೊಳಗೆ ನಗುವೇ?
ಇಲ್ಲಿ ಕಾದಿರು,ಎಂದು ಬೇಯುವ ತುಟಿಯೊ
ಸಲ್ಲಿಸಿತೆ ಸವಿಯ ? ಅಲ್ಲ ಮಸಾಲೆ ಮದ್ದು !
ಎಲ್ಲಿಯಾದರೂ ಬಿದ್ದು ಹೋದೀತೆಂಬ ನಗು
ಸುಳ್ಳಲ್ಲ, ಏಳಲಾಗದೆ ನನ್ನ ಗೆಲುವ ಸೋಗು!
3 comments:
ಸು೦ದರ ಉಪಮಾ ಪೂರ್ಣ ಕವನ. ನನ್ನ ಬ್ಲಾಗ್ ಗೆ ಬನ್ನಿ.
ಸುಂದರವಾದ ಉಪಮೆಗಳು.. ಬಹಳ ಚೆನ್ನಾಗಿದೆ.. ನಾನೂ ಅಲ್ಪ ಸ್ವಲ್ಪ ಗೀಚುತ್ತೇನೆ ಓದಿ ನಿಮ್ಮ ಸಲಹೆಗಳನ್ನು ಬಯಸುತ್ತೇನೆ...
www.anekar.blogspot.in ಬನ್ನಿ..
ನಿಮ್ಮ ವರ್ಣನೆ ತು೦ಬಾ ಚೆನ್ನಾಗಿದೆ...
Post a Comment