Friday, March 30, 2012

ನೀ ದೊರೆತ ಮೇಲೆ ನನಗಿನ್ನಾರು ಬೇಕು ?

ನೀ ದೊರೆತ ಮೇಲೆ ನನಗಿನ್ನಾರು ಬೇಕು
ನಿನ್ನೊಲವಲೇ ನಾನು ಬೆಳಗಬೇಕು !
ನಗೆಯೆಷ್ಟೋ ನೋವೆಷ್ಟೊ ಹಂಚಬೇಕು
ನನ್ನ ಬಾಳಿನ ಪುಟಕೆ ನಿನ್ನ ಕುಂಚ ಸಾಕು !

ನೋವು ಸಾವಿರಬರಲಿ, ನಗೆಗೆ ಸಾವಿರದಿರಲಿ
ಒಲವೆಂಬ ಒಳನದಿಯು ಚಿಮ್ಮುತಿರಲಿ
ಮನದ ವನದೊಳಗೆ ಹೂವರಳಿ ನಗುತಿರಲಿ
ಎಲ್ಲ ಹೃದಯದ ಮಾತು ಹರಿದು ಬರಲಿ

ಪ್ರೇಮವೆಂಬುದು ಬರಿದೆ, ಅಲ್ಲ ಬರಿ ಕಲ್ಪನೆಯೆ
ಮೋಸದಲಿ ಸಿಲುಕಿಸುವ ಪಾಶ ನೊಣೆಯೆ ?
ಮೋಹದಾತುರದಲ್ಲಿ ಹುಟ್ಟಿಬಹ ಕಾಮನೆಯೆ
ಜೀವಿ ಜೀವಿಗು ಇರುವ ಭಾವದೆಣೆಯೆ ?

೩೦-೦೩-೨೦೧೨

8 comments:

ಸಂಧ್ಯಾ ಶ್ರೀಧರ್ ಭಟ್ said...

ನೋವು ಸಾವಿರಬರಲಿ, ನಗೆಗೆ ಸಾವಿರದಿರಲಿ
ಒಲವೆಂಬ ಒಳನದಿಯು ಚಿಮ್ಮುತಿರಲಿ

ಚಂದದ ಸಾಲುಗಳು ಕಿರಣ .. ತುಂಬಾ ಇಷ್ಟ ಆತು ಕವನ ...

KiranP said...

ಮಸ್ತ್ ಇದ್ದು ನಿಮ್ಮ ಕವನ.. ಬಾಳಾ ಇಷ್ಟ ಆತು.. :)

Anitha Naresh Manchi said...

oppa iddu maani :)

Harisha - ಹರೀಶ said...

ಏನೆಂದೇ ತಿಳಿಯದ ಭಾವನೆಯೇ ಪ್ರೇಮ :)
ಚೆನ್ನಾಗಿದ್ದು

ರವಿ ಮೂರ್ನಾಡು said...

ಪದ ಬಳಕೆ ತುಂಬಾ ಖುಷಿ ಆಯಿತು. ಯಾವುದೋ ರಾಗ , ಯಾವುದೋ ಭಾವ ಕರೆದು ಕಟ್ಟಿ ತೆರೆಯುತ್ತಿದೆ ಸಾಲುಗಳಲ್ಲಿ. ಓದಲು ಕೊಟ್ಟಿದ್ದಕ್ಕೆ ಈಶ್ವರಣ್ಣ ಧನ್ಯವಾದಗಳು.

Nagashree said...

ಭಾವಪೂರ್ಣ ಕವನ...ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ ಎನ್ನುವ ಸಾಲು ನೆನಪಾಯ್ತು :)

prashasti said...

ಸಕತ್ತಾಗಿದ್ದು.. ಸಾವಿರದಲಿ, ಸಾವಿರದಿರಲಿ.. .ಹಿಂಗೆ ಸುಮಾರಷ್ಟು ಬಳಕೆಗಳು ಚೆನ್ನಾಗಿದ್ದು. ಸ್ವಲ್ಪ ತಡವಾದ ಪ್ರತಿಕ್ರಿಯೆಗೆ ಕ್ಷಮೆಯಿರ್ಲಿ ಮತ್ತೆ ಇಂಥ ನೂರೆಂಟು ಭಾವದ ಕವಿತೆಗಳು ನಿನ್ನಿಂದ ಹೊರಬರ್ಲಿ ಹೇಳಿ ಆಶಿಸೋ..

ಕಾವ್ಯಾ ಕಾಶ್ಯಪ್ said...

ನಗೆಯೆಷ್ಟೋ ನೋವೆಷ್ಟೊ ಹಂಚಬೇಕು
ನನ್ನ ಬಾಳಿನ ಪುಟಕೆ ನಿನ್ನ ಕುಂಚ ಸಾಕು !
sooper.... :)