Tuesday, April 17, 2012

ಪ್ರೀತಿ ಎಂದರೇನೆ ಸಖಿ ?

ಗುರುತಿಲ್ಲದ ಹೂಗಳಾಯ್ದು
ಸರತಿಯಲ್ಲೆ ಪೋಣಿಸುತ್ತ
ಧರಿಪ ಮಾಲೆಯೆನ್ನುವುದು !
ಪ್ರೀತಿ ಎಂದರೇನೆ ಸಖಿ ?

ಮಳೆಗೆಜ್ಜೆಯ ತಾಳದಲ್ಲಿ
ಹಳೆಯ ಕೊಳೆಯ ತೊಳೆಯುತಿಂತು
ಸುಳಿವ ನವೋತ್ಸಾಹ ಸೊಗಸೆ !
ಪ್ರೀತಿ ಎಂದರೇನೆ ಸಖಿ ?

ನನಗೆ ನೀನು ಕಾಯುವುದು
ನಿನ್ನ ನೆನೆದು ಬೇಯುವುದು
ಕನಸು ನನಸು ನೋವು ನಲಿವು !
ಪ್ರೀತಿ ಎಂದರೇನೆ ಸಖಿ ?

5 comments:

ಅನುರಾಧ. said...

ಪ್ರೀತಿಯೆಂದರೇನೆ ಸಖಿ...? ತುಂಬಾ ಸೊಗಸಾದ ಕವನ...:) ಖುಷಿ ಕೊಟ್ಟಿತು...!

ರವಿ ಮೂರ್ನಾಡು said...

ಇಲ್ಲಿಯ ಒಂದು ಉಪಮೆ ಬಹಳ ಖುಶಿ ಆಯಿತು.ಪಕ್ಕನೇ ಜೇಬಿಗಿಳಿಸಿಬಿಡುತ್ತೇನೆ.ಪ್ರಕೃತ್ತಿಯ ನವ ನವೀನ ಭಾಷ್ಯಗಳಿಗೆ ಹುಡುಕಾಡುವುದೇ ಹೊಸತನದ ನೋಟ.
ಇದುವರೆಗೆ ಇಂತಹ ಪ್ರಕೃತ್ತಿಯ ನಿನಾಧವನ್ನು ಆಲಿಸಿರಲೇ ಇಲ್ಲ. ಆಹಾ..!
" ಮಳೆಗೆಜ್ಜೆಯ ತಾಳದಲಿ" ಮೈ ಜುಮ್ಮೆನಿಸುವ ಭಾವ ಲಯ. ಈ ಒಂದು ಭಾವ ಸೃಷ್ಠಿಗೆ ನಮೋ ನಮಃ..

ಮೌನರಾಗ said...

Good one...Nice..

sunaath said...

ಭಟ್ಟರೆ,
ಸೊಗಸಾದ, ಸುರಾಗವಾದ ಪ್ರೇಮಗೀತೆಗಳನ್ನು ಹೊಸೆಯುತ್ತ ಸಾಗಿರುವಿರಿ. ಅಭಿನಂದನೆಗಳು.

Swarna said...

ಸುಂದರ ಸಾಲುಗಳು
ಅದರಲ್ಲೂ ಮೊದಲ ೩ ಸಾಲುಗಳು ತುಂಬಾ ಇಷ್ಟ ಆಯ್ತು