Wednesday, April 25, 2012

ಯುವಕನ ಹಾಡು !

೧.
ಓ ತಂದೆ
ಈ ಬಿಸಿಲು ಏಕೆ ತಂದೆ ?

ಹೀಗೆಂದ ಯುವಕ
ಕರಬೂಜ ತಿಂದ,
ಭಿತ್ತಕ್ಕೆ ಬಿಸಿಲು,
ಬಿಸಿಗೆದ್ದ ತೊಗಟೆ
ಮೊದಲ ಮಳೆಗೆ
ಟಿಸಿಲೊಡೆದದ್ದ ಕಂಡ


ಅವನು ಗುರು
ಚೈತನ್ಯದ ಚಿಗುರು!

ಬಂದವರಿಗೆಲ್ಲಾ ಆನಂದ ತಂದ
ಈ ಯುವಕ ಬಂದ !
ಗುರುವಿನ ಕಾವಿಯ ನೂಲು
ಸೀರೆಯ ರೇಶಿಮೆಯ ಜೊತೆಗಿತ್ತು !

೩.
ಬೆಂಕಿ ಸ್ವಾಮಿ !
ಮುಟ್ಟಲಿಲ್ಲವೋ ಕಾಮಿ,

ವಯಸ್ಸೆಷ್ಟು ? ಕೇಳಿದ
ಯುವಕಗಿಪ್ಪತ್ತಾರು ಎಂದ !
ಇದ್ದ ಕಾಮಕ್ಕೋ ನೂರು
ಒಣಗಿದ ಗಿಡಮರಕ್ಕೆ ಹಸಿರು ಬೇರು !

೪.
ಒಡತಿ ಇದ್ದಾಳೆಯೇ ?
ಇದ್ದವಳು ವಶ್ಯ !

ಹುಡುಕಿದ್ದು ಗಂಧ
ಮೀನಲ್ಲಿ ಸಿಕ್ಕಿದ್ದು ಯಾವ ಬಂಧ ?
ಧಾತುಚಲನೆಗೆ
ಮೀನಿನ ಹೆಜ್ಜೆಗಳು
ಕಾಣಲಾರದು, ಯುವಕನೆಂದ !

4 comments:

Dr.D.T.Krishna Murthy. said...

ಚೆಂದದ ಕವನ !!ಅಭಿನಂದನೆಗಳು.

Badarinath Palavalli said...

ಒಂದೇ ಕವಿತೆಯಲ್ಲಿ ಅದು ಹೇಗೆ ಹಲ ಭಾವಗಳನ್ನು ಸಿದ್ಧಿಸುತ್ತೀರಿ ಭಟ್ಟರೇ? ನನಗೆ ಇದೇ ಸೋಜಿಗ.

ವಾರೆವಾ ಅನ್ನುವಂತಹ ರಚನೆ.

ರವಿ ಮೂರ್ನಾಡು said...

ಚೆನ್ನಾಗಿದೆ ಕವಿತೆ. ಅಭಿನಂದನೆಗಳು.

Swarna said...

ಚೆನ್ನಾಗಿದೆ
ಸ್ವರ್ಣಾ