Monday, April 30, 2012

ಹೆಸರಿಡದ ಚಿತ್ರಗಳು !


ಬೆನ್ನಿನಲ್ಲಿ ಗೆರೆಯೆಳೆದ
ಮೊನ್ನಿನ ಮಳೆಗೆ ಹೀಗೆಯೇ !
ಹುಟ್ಟಲಾರದ ಕೆಲವು ಆಸೆಗಳು
ಮೊಟ್ಟೆಯಿಟ್ಟಿದೆ.

ಈ ಸಲವಾದರೂ ಮೋಸವಾಗದೆ
ಹೊಸ ಜೀವದ ಹುಟ್ಟು ಕಾಯುವ ಕ್ರೌಂಚ!
ಬೇಡ!
ಕೆಮೆರಾದ ಕಣ್ಣಲ್ಲಿ ಕಾಯುತ್ತಿದ್ದಾನೆ !

ಸುಡದೆ ಶುದ್ದವಾಗುವ ಸೀತೆ
ಸಿದ್ದಳಾಗುವಳೆಂದು,
ಒಳಗೆ ರಾವಣ ನಗುತ್ತಿದ್ದಾನೆ !

ಇದನ್ನೆಲ್ಲ ಒಂದೇ ಚೌಕಟ್ಟಿನಲ್ಲಿ
ಹಿಡಿದಿಡಲಾಗದೆ!
ಬೆಳಗಿನ ಜಾವದ ಅವಳ ಮುಂಗುರುಳಾಗಿದೆ

8 comments:

ವೆಂಕಟೇಶ್ ಹೆಗಡೆ said...

ಸುಡದೆ ಶುದ್ದವಾಗುವ ಸೀತೆ
ಸಿದ್ದಳಾಗುವಳೆಂದು,
ಒಳಗೆ ರಾವಣ ನಗುತ್ತಿದ್ದಾನೆ ! nice kirana ತುಂಬಾ ಚೆನ್ನಾಗಿದ್ದು

ಮಂಜಿನ ಹನಿ said...

ರಾಮಾಯಣದಲ್ಲಿ ಚೆಲ್ಲಿದಂತೆ ಅಳಿದುಳಿದ ಕನಸುಗಳು ಮೊನ್ನೆಯ ಮಳೆಗೆ ಮೊಳೆತು ಕುಡಿ ಹೊಡೆದಿದೆ ಎಂಬ ಉಪಮೆ ಚೆಂದವಾಗಿ ನಿಂತಿದೆ..
ಸುಡದೆ ಶುದ್ದವಾಗುವ ಸೀತೆ
ಸಿದ್ದಳಾಗುವಳೆಂದು,
ಒಳಗೆ ರಾವಣ ನಗುತ್ತಿದ್ದಾನೆ !
ಈ ಸಾಲುಗಳು ಏಕೋ ತುಂಬಾ ಕಾಡುವಂತವು ಎನಿಸಿದವು.. ಚೆಂದದ ಪದ್ಯ, ಪದಗಳ ಲಾಸ್ಯ ಹಿಡಿಸುವಂತದ್ದು..

prashasti said...

Chenda Ide :-)..
ಈ ಸಲವಾದರೂ ಮೋಸವಾಗದೆ
ಹೊಸ ಜೀವದ ಹುಟ್ಟು ಕಾಯುವ ಕ್ರೌಂಚ!
ಬೇಡ!
ಕೆಮೆರಾದ ಕಣ್ಣಲ್ಲಿ ಕಾಯುತ್ತಿದ್ದಾನೆ !..
Yako modalu swalpa arta aglilla :D

Dr.D.T.Krishna Murthy. said...

ಚೆಂದದ ಕವಿತೆ.ಧನ್ಯವಾದಗಳು.ಬ್ಲಾಗಿಗೆ ಭೇಟಿ ಕೊಡಿ.ನಮಸ್ಕಾರ.

sunaath said...

ಮೊನ್ನಿನ ಮಳೆಗೆ ಒಳ್ಳೆಯ ಕವನ ಹುಟ್ಟಿದೆಯಲ್ಲ!
ಇನ್ನೇನು ಬೇಕು, ಭಟ್ಟರೆ?

Badarinath Palavalli said...

ಹರವು ದೊಡ್ಡದು ಅಂತೆಯೇ ಬಂದು ಹೋಗುವ ಭಾವಗಳೂ ಸಹ!

ರಾಘವೇಂದ್ರ ಹೆಗಡೆ said...

ಚೆನ್ನಾಗಿದೆ..

"ಈ ಸಲವಾದರೂ ಮೋಸವಾಗದೆ
ಹೊಸ ಜೀವದ ಹುಟ್ಟು ಕಾಯುವ ಕ್ರೌಂಚ!
ಬೇಡ!
ಕೆಮೆರಾದ ಕಣ್ಣಲ್ಲಿ ಕಾಯುತ್ತಿದ್ದಾನೆ !"

ಸಾಲುಗಳು ತುಂಬಾ ಇಷ್ಟವಾದವು...

shadja said...

ಎಲ್ಲಾ ಬರಿಯ ನಿರೀಕ್ಷೆಗಳೇ!! ಇಶ್ಟ ಆಯ್ತು :)