ಹಕ್ಕಿನೋಡಿ ಮರುಳಾಗಿ
ಅಂತೆಯೇ ಹಾರಬಯಸಿದೆ
ಬಿದ್ದೆ, ಸಾವರಿಸಿಕೊಂಡು ಎದ್ದೆ.
ಕೈಗಳೇಕೋ ರೆಕ್ಕೆ ಆಗಲೇ ಇಲ್ಲ.
ಲೆಕ್ಕವಿರಿಸಿಕೊಂಡೆ
ಒಂದು ಎರಡು ಅಲ್ಲ ಮೂವತ್ತಮೂರು!
ಕೊನೆಗೆ ದಕ್ಕಿದ್ದೆಷ್ಟು?
ಬರಿಯ ಹಿಕ್ಕೆ!
ಅವು ಹಾಗೇ ಹಾರುವುದಿಲ್ಲ
ತತ್ತಿ, ಬಿರಿದೊಡೆಯಬೇಕು
ಮತ್ತೇನೋ ಬಿಸಿ ಮುಟ್ಟಿ
ಹೊಟ್ಟೆ ಚುರುಕ್ಕೆಂದಾಗ
ಗೂಡಿನ ಜಾಗ ಸಾಲುವುದಿಲ್ಲ
ಎನಿಸಬೇಕು.
ಅರಿವಾದಾಗ ಹಾರುವುದು
ಹಾರಿದಂತೆಯೇ ಅರಿವು.
5 comments:
ಅರಿವಾದಾಗ ಹಾರುವುದು
ಹಾರಿದಂತೆಯೇ ಅರಿವು.Super.
ಹಾರುವಿಕೆ ಮತ್ತು ಅರಿವಿಗೂ ಇರುವ ತತ್ಸಂಬಂಧವನ್ನು ಅಮೋಘವಾಗಿ ಚಿತ್ರಿಸಿಕೊಟ್ಟಿದ್ದೀರ ಸಾರ್.
ಮನೋ ವಿಕಸನ ಕವನ.
ವಾಹ್! ಹಕ್ಕಿಯ ಗುಟ್ಟನ್ನು ಸರಿಯಾಗಿ ತಿಳಿಸಿದ್ದೀರಿ! ಉತ್ತಮ ಕವನ.
ಲೆಕ್ಕವಿರಿಸಿಕೊಂಡೆ
ಒಂದು ಎರಡು ಅಲ್ಲ ಮೂವತ್ತಮೂರು!... :-) :-)
Nice
Post a Comment