ಇನ್ನೆಷ್ಟು ಕಾಲ ಕಾಯಬೇಕೇ
ಜೊತೆಗೆ ನಡೆಯಲು?
ಒಂಟಿಯಾಗಿ ಸವೆಯಬೇಕೇ
ನನ್ನ ದಿನಗಳು?
ಉಳಿಸಿ ಹೋದ ಮಾತುಗಳಲಿ
ಕತೆಯು ಬದುಕಿದೆ
ಮೌನ ಆಳೋ ಸಮಯದಲ್ಲಿ
ನೋವು ಕೆದಕಿದೆ.
ಎಲ್ಲೊ ಅರಳಿ ಎಲ್ಲೊ ಹೊರಳಿ
ನಗುವು ಬಳಲಿದೆ
ಇನ್ನೂ ಕಾಲ ಒದಗಲಿಲ್ಲ
ಎನುತ ಒಣಗಿದೆ.
ಕಾಯುವುದೋ ನೋಯುವುದೋ
ಏನೋ ಅರಿಯೆನು
ನಿನ್ನ ಒಳಗೇ ಹರಿಯುತಿರುವೆ
ಎಂದುಕೊಳುವೆನು.
ಚಿತಕೃಪೆ : ವೆಂಕಟ್ ಕೋಟೂರ್
(ಒಂದೇ ಹೆಜ್ಜೆಯ ಗುರುತು)
4 comments:
ಕಾಯಬೇಕಾದ್ದು ಜೊತೆಯಾಗಿ ಸಾಗುವುದಕ್ಕೆ.... ಅರೇ ವಾಹ್.... ಆ ಸಾಗುವಿಕೆಗೆ ಜೊತೆ ಬೇಕೇ... ? ಬೇಕು ಬೇಕು...ಏಕೆಂದರೆ ಮನದಭಾವಗಳನರುಹುತ್ತ ಪಂಥಾಯಾಸ ಪರಿಹರಿಸಿಕೊಳ್ಳಲಾದರೂ ಜೊತೆಗೆ ಬೇಕು ಅದೂ ಹಿತವಾದ ಜೊತೆ ಬೇಕು.
ಆದರೆ ಈಗ ಜೊತೆಯಿಲ್ಲದ ನೋವು... ಜೊತೆ ಸಿಕ್ಕಿದ ಮ್ಯಾಲೆ.. ಜೊತೆಗೇ ಇಲ್ಲವಲ್ಲಾ ಎಂಬ ನೋವು... ಕೊನೆಯಲ್ಲಿ.... ಹೋಗುವಾಗ ಜೊತೆಯಾಗಲಿಲ್ಲವಲ್ಲಾ ಎಂಬ ನೋವಿಗೆ.... ಎಣೆ, ಎಲ್ಲೆಯಿದೆಯೇ...?
ಎಂತ ಬೀಜವೂ ಸಹ ಮಣ್ಣ ಪದರಗಳಲ್ಲಿ ಅವಿತು ಮೊಳಕೆಯೊಡೆಯಲು ಕಾಲಕ್ಕೆ ಕಾಯುವುದು ತಾ. ಅಂತೆಯೇ ಒಲುಮೆ ಸಾಕ್ಷಾತ್ಕಾರವೂ ಸಹ.
ಉತ್ತಮ ಕಾವ್ಯ ಪ್ರಯೋಗ.
ವೆಂಕಟ್ ಕೋಟೂರ್ ಅವರ ಚಿತ್ರ ಮಾರ್ಮಿಕವಾಗಿದೆ.
ನಿಮ್ಮ ಮತ್ತು ಬದರಿ ಸರ್ ಪ್ರತಿಕ್ರಿಯೆ ಎರಡೂ ಚಂದ
ಕಾಯೋದು ನೋಯೋದು ಬೇಡ ಹಾಡಿಕೊಳ್ತಾ ಇರಿ :)
ತಾಳಿದವನು ತಾಳಿ ಕಟ್ಟಿಯಾನು!
Post a Comment