Wednesday, September 11, 2013

ವಿಪರ್ಯಾಸ

ಇಲ್ಲೊಬ್ಬಳು ಹುಡುಗಿ;
ಜಾರುವ ಸೀರೆಯುಟ್ಟು
ಸೊಂಟದೊಲೊಂದು ಕೊಡವಿಟ್ಟು
ನೀರಿಗೆಂದು ಬಂದುದ ಕಂಡೆ.

ತೊಟ್ಟಿಕ್ಕುವ ನಲ್ಲಿಯಲ್ಲಿ
ಅಚಾನಕ್ಕಾಗಿ ಧಾರೆಯಂತೆ ನೀರು!
ಕೊಡ ತುಂಬಿದುದನ್ನು
ಅವಳ ಕಣ್ಣಲ್ಲಿ ಕಂಡೆ;

ನಜೂಕು ನಡೆಯವಳು
ಕೊಡವನ್ನು ಏರಿಸಿ;
ನಡೆಯುವಾಗ ಎಡವದಂತೆ
ಸೀರೆಯನ್ನೆತ್ತಿ ಕಟ್ಟಿದಳು!

ಇದುವರೆಗೆ ರಮ್ಯವಾಗಿದ್ದ ನೋಟಕ್ಕೆ
ಕೃತಕ ಕಾಮದ ಅಡ್ಡಗಾಲು!
ಅವಳು ಬಿದ್ದಳು
ಕೊಡದಲ್ಲಿದ್ದ ಚಿಮ್ಮಬೇಕಿದ್ದ ನೀರು
ಚೆಲ್ಲಿದ್ದು ಕಂಡೆ.

4 comments:

Badarinath Palavalli said...

ನಿಜ ನೋಡುವ ನೋಟದಿಂದಲೇ ಕ್ರಿಯೇ ಮತ್ತು ಪ್ರತಿಕ್ರಿಯೇ. ನಮ್ಮ ಕಡೆ ದೃಷ್ಟಿಯಾಗುತ್ತೆ ಅನ್ನುತ್ತಾರೆ, ಹಾಗಾಯ್ತು ಚೆಲುವೆಯ ಪಾಡೂ!
ರಸಿಕ ರಸಿಕ ರಸಿಕ ಈಶ್ವರ!!

ಮನಸು said...

ಹಹಹ... ನೀರು ಹೊತ್ತ ನೀರೆಗೆ ಕಿರಣ ಮಾರುಹೋದ

sunaath said...

ನೋಟ ರಮ್ಯವಾಗಿದ್ದಾಗ, ದೃಷ್ಟಿಸುವದರಲ್ಲಿ ತಪ್ಪೇನಿಲ್ಲ. ಇನ್ನು ಕೃತಕ ಕಾಮ ಅಡ್ಡ ಬಂದಾಗ, ಕೊಡದ ನೀರು ಚೆಲ್ಲುವುದು ಸಹಜವೇ ಸರಿ!

ಕಾವ್ಯಾ ಕಾಶ್ಯಪ್ said...

nice one.... ನೀರೆಯ ಸೀರೆ, ನೆರಿಗೆ ಮತ್ತು ನೀರಿಗೆ 'ನೀರಾ'ದ ನಶೆ ಏರಿತಾ ಕಿರಣಾ..?! ;) :P