ಅವಳು ಹಳ್ಳಿಯ ಹುಡುಗಿ ನಗರ ಚೆಲುವನ ಕಂಡು
ಮದುವೆಯಾಯಿತು ಮೊನ್ನೆ; ತಿಂಗಳಾಯ್ತು
ಬಿದ್ದ ಅಕ್ಷತೆಕಾಳು ಹೆರಳ ಸಂಧಿಯ ತೊರೆದು
ನಗರ ಜೀವನದೊಲುಮೆ ಜೊತೆಗೆ ಬಂತು.
ಬಾಗಿಲನು ತೆರೆದಿರಿಸಿ ಕೂರದಿರು ಎಂದಿಹನು
ಯಾವ ಕಳ್ಳರ ಭಯವೊ ತಿಳಿಯದಲ್ಲ!
ಹೊಸಿಲು ದಾಟುವ ಮೊದಲು ಯೋಚನೆಯ ಸರಮಾಲೆ
ಅವಳ ಕೇಳುವ ಕಿವಿಯು ಸಿಗುವುದಿಲ್ಲ
ಸಂಜೆಯಾದರೆ ಅವಳು ನೆನೆಯುವಳು ಊರನ್ನು
ತುಳಸಿ ಹೂವಿನ ಎದುರು ದೀಪವನ್ನು
ಕರುವನಾಡಿಸುವಾಗ ಹಸು ತಿನ್ನಬಯಸುವುದು
ಮುಡಿದು ಬಾಡಿದ ಹೆರಳ ಹೂಗಳನ್ನು.
ದೂರದಲಿ ಸದ್ದಾಗಿ ವಾಸ್ತವಕೆ ಬರುವವಳು
ಅವನ ದಾರಿಯ ಕಾಯ್ವ ಹೆಣ್ಣುಮಗಳು
ಮನೆಯ ನೆನಪಲಿ ಮಿಡಿದ ಕಂಬನಿಯ ಒರೆಸುವಳು
ಒಳಮನೆಯ ಕೋಣೆಯಲಿ ಹಣತೆಯಿರುಳು.
Saturday, June 6, 2015
ಗೋಕುಲದ ಸಂಜೆ.
ಗೋಕುಲದ ಸಂಜೆಯಲಿ ದನದ ಕೊರಳಿನ ದನಿಯು
ರಾಧೆ ಸಖಿಯಳ ಗೆಜ್ಜೆ ಬೆರೆತು ಕೇಳಿ;
ನೀಲ ಶ್ಯಾಮನ ಮುರಳಿ ಜೊತೆ ಬೆರೆದು ಉಲಿಯುತಿದೆ
ದಣಿವು ಸೂರ್ಯನಿಗಲ್ತೆ? ಸುಖದ ಹೋಳಿ
ಗೋಪಿಕೆಯ ಪಾದಗಳು ಪುಡಿಯಾಯ್ತು ಕುಣಿದಾಡಿ
ನರುಗೆಂಪು ಧೂಳಿನಲಿ ಬಾನು ತಲುಪಿ
ಬೆಟ್ಟದೂರದ ಹಿಂದೆ ಕೆಂಪು ಕಪ್ಪೇರುತಿದೆ
ಕಿವಿಯ ಓಲೆಯ ಸುತ್ತ ಹೆರಳು ಸಿಲುಕಿ
ನಡೆ ಶ್ಯಾಮ ನುಡಿ ಶ್ಯಾಮ ಕುಣಿಯುತ್ತ ಓಲಾಡು
ಬೆನ್ನುಗೀರುತ ಬಹಳು ರಾಧಾ ಸಖಿ!
ಗೋವುಗಳ ದಾರಿಯಲಿ ಓಡುವುದು ಬಲುಕಷ್ಟ
ನಿಂತುಬಿಟ್ಟರೆ ಶ್ಯಾಮ! ಅವಳೇ ಸುಖಿ
ಕತ್ತಲೆನ್ನುವ ಮಾರ ತಬ್ಬಿಕೊಂಡನು ಇಳೆಯ
ಕುಣಿತ ತಗ್ಗಿತು ಜಗದಿ; ಇರುಳಾಯಿತು
ಮನೆಯ ಸೇರುವ ಸಮಯ, ದೀಪ ಬೆಳಗುತ್ತಲಿದೆ
ಒಂದು ಸಂಜೆಯ ಕಾವ್ಯ ಕೊನೆಯಾಯಿತು.
Wednesday, February 11, 2015
ಇನ್ಯಾವಳೂ ಅವಳಲ್ಲ.
ಮೆಲ್ಲ ನಕ್ಕಳು ಸಂಜೆ; ಕಾಲ್ದಾರಿಯಂಚಿನಲಿ
ನೋಡಿದಳೆ? ಕೆಣಕಿದಳೆ? ನನ್ನ ಹೀಗೆ
ಯಾವುದೋ ಧ್ಯಾನದಲಿ ಕಣ್ಣುಗಳು ಜೊತೆ ಸೇರಿ
ಅವಳ ಹೆಜ್ಜೆಯ ಹಿಡಿದು ಬೆಸೆವ ಬೇಗೆ.
ಇದುವರೆಗೆ ನಿಶ್ಚಲವು ಕೆಂಪು ಹೂವಿನ ಮರವು
ಅವಳ ನಗು ಕಂಡೊಡನೆ ಹೂವು ಚೆಲ್ಲಿ;
ಗಂಟಲೊಣಗಿದ ಹಕ್ಕಿ ಸುಮ್ಮನುಳಿಯುವುದೇನು
ನನ್ನ ಭ್ರಮೆಯೊಂದಿಗೇ ಹಾಡಿತಲ್ಲಿ.
ಹೂವ ಮಾರುವ ಅಜ್ಜಿ ಯಾವುದೋ ನೆನಪಿನಲಿ
ಕೊಡುವ ಮಲ್ಲಿಗೆಗೇನು ಗಂಧವಿರದೆ?
ಅವಳ ನಗುವಿನ ಹಿಂದೆ ನಾನು ಇರದಿರೆ ಸೋಲೆ?
ಪ್ರೀತಿ ನಗುವಲಿ ಬದುಕಿ ಬಾಳದಿಹುದೆ?
ಬಾಗಿಲನು ಅರೆತೆರೆದು ಮುಡಿಯ ಬೈತಲೆ ತೆಗೆದು
ನನ್ನವಳು ನನಗಾಗಿ ಕಾಯುತಿಹಳು.
ಮಲ್ಲಿಗೆಯ ಜೊತೆಯಿರುವ ತುಳಸಿ ಹೂ ನಗುತಲಿದೆ
ಅವಳ ಕನಸಲಿ ಹೀಗೆ ಬೆಳಕಿನಿರುಳು.
ನೋಡಿದಳೆ? ಕೆಣಕಿದಳೆ? ನನ್ನ ಹೀಗೆ
ಯಾವುದೋ ಧ್ಯಾನದಲಿ ಕಣ್ಣುಗಳು ಜೊತೆ ಸೇರಿ
ಅವಳ ಹೆಜ್ಜೆಯ ಹಿಡಿದು ಬೆಸೆವ ಬೇಗೆ.
ಇದುವರೆಗೆ ನಿಶ್ಚಲವು ಕೆಂಪು ಹೂವಿನ ಮರವು
ಅವಳ ನಗು ಕಂಡೊಡನೆ ಹೂವು ಚೆಲ್ಲಿ;
ಗಂಟಲೊಣಗಿದ ಹಕ್ಕಿ ಸುಮ್ಮನುಳಿಯುವುದೇನು
ನನ್ನ ಭ್ರಮೆಯೊಂದಿಗೇ ಹಾಡಿತಲ್ಲಿ.
ಹೂವ ಮಾರುವ ಅಜ್ಜಿ ಯಾವುದೋ ನೆನಪಿನಲಿ
ಕೊಡುವ ಮಲ್ಲಿಗೆಗೇನು ಗಂಧವಿರದೆ?
ಅವಳ ನಗುವಿನ ಹಿಂದೆ ನಾನು ಇರದಿರೆ ಸೋಲೆ?
ಪ್ರೀತಿ ನಗುವಲಿ ಬದುಕಿ ಬಾಳದಿಹುದೆ?
ಬಾಗಿಲನು ಅರೆತೆರೆದು ಮುಡಿಯ ಬೈತಲೆ ತೆಗೆದು
ನನ್ನವಳು ನನಗಾಗಿ ಕಾಯುತಿಹಳು.
ಮಲ್ಲಿಗೆಯ ಜೊತೆಯಿರುವ ತುಳಸಿ ಹೂ ನಗುತಲಿದೆ
ಅವಳ ಕನಸಲಿ ಹೀಗೆ ಬೆಳಕಿನಿರುಳು.
Sunday, February 8, 2015
ಪ್ರೇಮಪತ್ರ ಸಿಕ್ಕು!
ಕಾಲುದಾರಿಯ ನಾನು ಮರೆತು ಹೋಗುವನಲ್ಲ
ದಾರಿಯುದ್ಧಕು ನೋಡಿ ನಡೆಯುವವನು
ನಿನ್ನೆ ನಡೆಯುತಲಿರಲು ದಾರಿಯಲಿ ಕಂಡೆನಾ
ಮುದುಡಿದ್ದ ಕಾಗದದಿ ಪ್ರೀತಿಯನ್ನು
ಒಲವು ತುಂಬಿದ ಶಾಯಿ ಕುಶಲವನು ಕೇಳಿತ್ತು
ಕಳಕಳಿಯ ಕಾಳಜಿಯ ಗೇಯವಿತ್ತು
ಅವನದೊ ಅವಳದೋ ಎನುವ ಮಾತುಗಳಿರದೆ
ಎರಡು ಎದೆಗಳ ಮಾತು ಕನಸುತಿತ್ತು
ಅವನು ಅವಳಿಗೆ ಕೊಟ್ಟ ಅವಳು ಅವನಿಗೆ ಕೊಟ್ಟ
ಮಾತುಗಳ ಮುತ್ತುಗಳ ವಿವರದೊಳಗೆ
ಸಂಜೆಯಾಗಲು ಬರುವೆ ರಾತ್ರಿ ಕನಸಲಿ ಕರೆವೆ
ಪ್ರೇಮಸೌಭಾಗ್ಯವದು ಕಹಿಯೆ ಕೊನೆಗೆ?
ಪ್ರೀತಿ ಮುದುಡಿತು ಎಂದು ನಿಟ್ಟುಸಿರು ಬಿಡಲಾಗಿ
ನನ್ನವಳು ಕಂಡಳದೊ ದೂರದಲ್ಲಿ
ಹೆಸರು ಹೇಳದ ಪತ್ರ ಒಲವಿಗಾಗಿಯೆ ಮುಡಿಪು
ಕೊಟ್ಟೆನವಳಿಗೆ ನನ್ನ ಪ್ರೀತಿಯಲ್ಲಿ.
ದಾರಿಯುದ್ಧಕು ನೋಡಿ ನಡೆಯುವವನು
ನಿನ್ನೆ ನಡೆಯುತಲಿರಲು ದಾರಿಯಲಿ ಕಂಡೆನಾ
ಮುದುಡಿದ್ದ ಕಾಗದದಿ ಪ್ರೀತಿಯನ್ನು
ಒಲವು ತುಂಬಿದ ಶಾಯಿ ಕುಶಲವನು ಕೇಳಿತ್ತು
ಕಳಕಳಿಯ ಕಾಳಜಿಯ ಗೇಯವಿತ್ತು
ಅವನದೊ ಅವಳದೋ ಎನುವ ಮಾತುಗಳಿರದೆ
ಎರಡು ಎದೆಗಳ ಮಾತು ಕನಸುತಿತ್ತು
ಅವನು ಅವಳಿಗೆ ಕೊಟ್ಟ ಅವಳು ಅವನಿಗೆ ಕೊಟ್ಟ
ಮಾತುಗಳ ಮುತ್ತುಗಳ ವಿವರದೊಳಗೆ
ಸಂಜೆಯಾಗಲು ಬರುವೆ ರಾತ್ರಿ ಕನಸಲಿ ಕರೆವೆ
ಪ್ರೇಮಸೌಭಾಗ್ಯವದು ಕಹಿಯೆ ಕೊನೆಗೆ?
ಪ್ರೀತಿ ಮುದುಡಿತು ಎಂದು ನಿಟ್ಟುಸಿರು ಬಿಡಲಾಗಿ
ನನ್ನವಳು ಕಂಡಳದೊ ದೂರದಲ್ಲಿ
ಹೆಸರು ಹೇಳದ ಪತ್ರ ಒಲವಿಗಾಗಿಯೆ ಮುಡಿಪು
ಕೊಟ್ಟೆನವಳಿಗೆ ನನ್ನ ಪ್ರೀತಿಯಲ್ಲಿ.
ಕಾಣೆಯಾಗಿದೆ : ಬಾಲ್ಯದ ಚಿತ್ರ.
ನನ್ನ ಬಾಲ್ಯದ ಚಿತ್ರ ಕಾಣೆಯಾಗಿದೆ
ಹುಡುಕಿಕೊಟ್ಟವರಿಗುಂಟು
ಪೆಪ್ಪರಮೆಂಟು.
ಮೀಸೆಯಿಲ್ಲದ ಮುಖವು,
ಬಿಳಿಯಿರದ ತಲೆಕಸವು
ಮೇದು ಕಪ್ಪಾಗಿರುವ ಹಲ್ಲುಕುಳಿಯು
ಜೇಬು ಹರಿದಿಹ ಚಡ್ಡಿ
ಅದಲು ಬದಲಿನ ಗುಂಡಿ
ಕಡ್ಡಿಮೀರಿದ ಹೊದಿಕೆ ಇರುವ ಕೊಡೆಯು
ಕವಚ ಕಳೆದಿಹ ಬಾಲು
ಬುಡವು ಸವೆದಿಹ ಬ್ಯಾಟು
ಜಾರುವುದಕೇ ಇರುವ ಪಾದರಕ್ಷೆ
ಓದದಿದ್ದರು ಬರೆವ
ಬರೆಯದಿದ್ದರು ಬೆಳೆವ
ಆ ಕತೆಯ ಈ ಕತೆಯ ಪಾಠ ಶಿಕ್ಷೆ!
ಬೇಸಿಗೆಯ ಆಟದಲಿ
ಗೇರು,ಮಾವನ ಹೊಸಕಿ
ತೆಂಗು ಕಂಗಿನ ಮರಕೆ ಹತ್ತಿ ಹಾರಿ;
ಯಾವುದೋ ಕಾಲಕ್ಕೆ
ಮರೆತು ಇಟ್ಟಿಹೆನೆಲ್ಲೋ
ನನ್ನ ಬಾಲ್ಯದ ಚಿತ್ರ ಹುಡುಕಿ ಕೊಡಿರಿ.
ಹುಡುಕಿಕೊಟ್ಟವರಿಗುಂಟು
ಪೆಪ್ಪರಮೆಂಟು.
ಮೀಸೆಯಿಲ್ಲದ ಮುಖವು,
ಬಿಳಿಯಿರದ ತಲೆಕಸವು
ಮೇದು ಕಪ್ಪಾಗಿರುವ ಹಲ್ಲುಕುಳಿಯು
ಜೇಬು ಹರಿದಿಹ ಚಡ್ಡಿ
ಅದಲು ಬದಲಿನ ಗುಂಡಿ
ಕಡ್ಡಿಮೀರಿದ ಹೊದಿಕೆ ಇರುವ ಕೊಡೆಯು
ಕವಚ ಕಳೆದಿಹ ಬಾಲು
ಬುಡವು ಸವೆದಿಹ ಬ್ಯಾಟು
ಜಾರುವುದಕೇ ಇರುವ ಪಾದರಕ್ಷೆ
ಓದದಿದ್ದರು ಬರೆವ
ಬರೆಯದಿದ್ದರು ಬೆಳೆವ
ಆ ಕತೆಯ ಈ ಕತೆಯ ಪಾಠ ಶಿಕ್ಷೆ!
ಬೇಸಿಗೆಯ ಆಟದಲಿ
ಗೇರು,ಮಾವನ ಹೊಸಕಿ
ತೆಂಗು ಕಂಗಿನ ಮರಕೆ ಹತ್ತಿ ಹಾರಿ;
ಯಾವುದೋ ಕಾಲಕ್ಕೆ
ಮರೆತು ಇಟ್ಟಿಹೆನೆಲ್ಲೋ
ನನ್ನ ಬಾಲ್ಯದ ಚಿತ್ರ ಹುಡುಕಿ ಕೊಡಿರಿ.
Subscribe to:
Posts (Atom)