ಹಚ್ಚುತ್ತಿದ್ದೆ ಸಣ್ಣ ಕಾಗದ ಚೂರ
ಕೈ ಮೇಲೆ ಬಿದ್ದಾಗ ಉರಿಯಬಹುದೋ ಎಂದು
ಹೆದರಿಕೆ ಇದ್ದರೂ ಹಚ್ಚಿದೆ,
ಬಿದ್ದರೂ ಸುಡದೇ ಇದ್ದದ್ದಕ್ಕೆ ಬೆಚ್ಚಿದೆ.
ಅದೆ ಆಶ್ಛರ್ಯ,
ಬೆಳ್ಳಂಬೆಳಗೆ ನಡೆಯುವಾಗ
ನಡುಬಳುಕಿಸಿ, ಕೆಣಕಿ ನಡೆದ
ಮೋಹಗಾತಿ ಚೆಲುವೆಯನ್ನ ಕಂಡಾಗ
ಕಣ್ ಸುಟ್ಟಿತ್ತು,
ನಡುವೆಯೆಲ್ಲೋ ತಿರುಗುವಾಗ
ನಗೆಯ ನಡುವೆ ಹೊರಳಿದಂತ
ಅವಳ ಮಾತು ಮನವ ಸುಟ್ಟಿತ್ತು.
ಸೋಕಿದರೂ ಸೋಕದಂತೆ
ತಾಕಿದ ಮೈಬಿಸಿಯುಸಿರಿಗೆ
ಅವಳ ಕಾವು ಹೆಚ್ಚು ಎಂದು
ದೇಹ ಸುಟ್ಟಿತ್ತು,
ಬೂದಿಯಾಗೊ ಆಸೆ ಹುಟ್ಟಿತ್ತು.
೦೫-೦೮-೨೦೧೧
1 comment:
ಬೆಳಗಿನ ಜಾವದಲ್ಲಿ ನಡುಬಳುಕಿಸಿ ನಡೆವ ಮೋಹಗಾತಿ ಚಲುವೆಯ ನೋಟ, ವನಪು, ಮೈಯ ಬಿಸಿ. ಇವುಗಳು ಯುವಕನ ಒಂದೊಂದು ಅವಯವಗಳನ್ನು ಸುಡುವ ಶಕ್ತಿ ಹೊಂದಿದೆ ಅಂದರೆ, ಆ ಚಲುವೆಯ ಪ್ರಖರತೆ ಎಂತಹದಿರಬೇಕು. ತುಂಬಾ ಅಂದದ ಸಾಲುಗಳು. ಇನ್ನು ಮುಂದೆ ನಾನು ಸಹ ಬೆಳಗಿನ ಸಮಯದಲ್ಲಿ ವಾಯು ವಿಹಾರ ಮಾಡೋಣ ಎಂದು ತೀರ್ಮಾನಿಸಿದ್ದೇನೆ. ವಂದನೆಗಳು.
Post a Comment