ಇಬ್ಬನಿಯ ಕಣ್ಣಲ್ಲಿ ನಿನ್ನ ನೋಡಿದ ನೆನಪು
ಮಬ್ಬಾದ ನಿನ್ನ ತುಟಿ ಬೆಳಗಿನಲ್ಲೆ
ತಬ್ಬಿದಾ ಚಂದಿರನ ಕುರುಹು ಹೆರಳಿನೊಳಿರಲು
ತಬ್ಬಿಬ್ಬುಗೊಂಡಿರುವೆ ಏಳು ನಲ್ಲೆ ......
ಹಕ್ಕಿಗಳ ಇಂಚರವು ನಿನ್ನ ಪಿಸುಮಾತಿನೊಳು
ಮಿಕ್ಕ ಪ್ರಣಯದ ಕಥೆಯ ಹೇಳಿದಂತೆ
ಪಕ್ಕದಲೆ ಬಿದ್ದಿರುವ ಚೆಂಗುಲಾಬಿಯ ಎಸಳು
ಸಿಕ್ಕಿಹುದು ಎನಗೀಗ , ಏಳು ನಲ್ಲೆ...
ಮಲ್ಲಿಗೆಯೊ ಸಂಪಿಗೆಯೊ ಮತ್ತೆ ಕೆಂದಾವರೆಯೊ
ಎಲ್ಲ ಮಾಯವೆ ,ಗೆಳತಿ ನಗುವಿನಲ್ಲೆ
ನಿಲ್ಲುವುದು ಹೃದಯದಲಿ ನಿನ್ನ ಪ್ರೇಮದ ಗೆರೆಯು
ನಲ್ಲೆ ನನ್ನನು ನೋಡೆ, ಏಳು ನಲ್ಲೆ !
26.09,2011
12 comments:
ಆದಿಪ್ರಾಸ ಕೂಡಿಸಿ ಚೆನ್ನಾಗಿ ಬರದ್ದೆ ಕಿರಣಣ್ಣ :-)
ಅದ್ಭುತ ಅದ್ಭುತ ಅದ್ಭುತ
ಪಕ್ಕದಲೆ ಬಿದ್ದಿರುವ ಚೆಂಗುಲಾಬಿಯ ಎಸಳು
ಸಿಕ್ಕಿಹುದು ಎನಗೀಗ , ಏಳು ನಲ್ಲೆ...
ನಿಜವಾಗೂ ಭಾವಪೂರ್ಣ!!
ಭಟ್ಟರು ಪ್ರೇಮೋತ್ಸಾಹದಲ್ಲಿ ಬಿದ್ದ ಹಾಗಿದೆ. ಆಕೆಯನ್ನು "ಏಳು ನಲ್ಲೆ!" ಅಂತ ಮುದ್ದುಗೆರೆಯಲು ಆರಂಭಿಸಿ ನಮಗೆ ಸುಳುಹು ಬಿಟ್ಟುಕೊಟ್ಟಿದ್ದಾರೆ.
ಭಾಷೆಯನ್ನು ಸರಳವಾಗಿ ಬಳಸಿಕೊಳ್ಳುವುದು ಮತ್ತು ಪದಗಳನ್ನು ಅರ್ಥ ಗಾಂಭೀರ್ಯವಾಗಿ ಬರೆಯುವುದು, ನಿಮ್ಮಿಂದ ಕಲಿಯ ಬೇಕು.
Hmmmm... ಯಾರದು ನಲ್ಲೆ ?????
ಚೆನ್ನಾಗಿದೆ... ಜೊತೆಗೆ ನಿಮ್ಮ ಆದಿಪ್ರಾಸದ ಪ್ರಯೋಗ ಕೂಡ...
sakattaagide. KSN avara marimaga bareda haagide. tumbaa ishtavaaytu.
Chennaide sir
praasa prayoga yaavagalu traasina prayoga agabardu alvaa
olleya baraha
ಕಾವ್ಯದ ಲಯ, ಭಾವ ಪರವಶತೆ ತುಂಬಾ ಖುಷಿ ಕೊಟ್ಟಿತು ಈಶ್ವರಣ್ಣ.ಕವಿತೆಯನ್ನು ಇನ್ನಷ್ಟು ನಮಗೆ ಬಡಿಸಿ.
chennagide sir..ishta aytu..
ಮಲ್ಲಿಗೆಯೊ ಸಂಪಿಗೆಯೊ ಮತ್ತೆ ಕೆಂದಾವರೆಯೊ
ಎಲ್ಲ ಮಾಯವೆ ,ಗೆಳತಿ ನಗುವಿನಲ್ಲೆ....ತುಂಬಾ ಅರ್ಥಗರ್ಬಿತವಾಗಿದ್ದು..ಚಂದ ಬರದ್ದೇ ಕಿರಣ...
ನಿಮ್ಮ ಪ್ರೇಮ ಕಾವ್ಯದ ಪದಬಳಕೆ ತುಂಬಾ ಸೊಗಸಾಗಿದೆ
ಪ್ರೀತಿಯ... ಪ್ರೇಮದಿಂದ... ಎಬ್ಬಿಸಲು ... ಅಬ್ಬಬ್ಬಾ ... ಕವನದಲ್ಲೂ ಪ್ರೀತಿ ಪ್ರೇಮದ ಸೌಂದರ್ಯ ... ಎದ್ದು ಕಾಣುತ್ತಿದೆ... :)
ಕವಿತೆಯ ಕಿರಣ ಇಲ್ಲಿ ಬಂತು. ಒಂದು ಪ್ರಣಯ ಕವಿತೆ ಮೈ ನವಿರೇಳಿಸುತ್ತಿದೆ.ನನಗೆ ತುಂಬಾ ಖುಷಿಯಾಗುವುದು ನಿಮ್ಮ ಕಾವ್ಯದಲ್ಲಿ ಲಯ ಮತ್ತು ಅದಕ್ಕೊಪ್ಪುವ ಮುತ್ತಿನಂತ ಪದ .ಮಾತ್ರೆಗೆ ಒಪ್ಪಿಸಿದರೂ ಅಲ್ಲಿ ಸರಿ ಅಂತ ಅಂಕ ಬೀಳುತ್ತದೆ. ತುಂಬಾ ಸುಂದರವಾದ ಪ್ರಣಯದ ಪ್ರಣತಿ ಸೊಗಸಾಗಿ ಬಂದಿದೆ.ಸಂಗೀತಕ್ಕ ಅಳವಡಿಸಲು ಸೂಕ್ತವಾಗಿದೆ. ಅದು ಭಾವಗೀತೆಗಳ ದಾಟಿಯಲ್ಲೇ ರಾಗಗಳನ್ನು ತೆಗೆದುಕೊಂಡರೆ ಉತ್ತಮ.ಆಲಾಪನೆಯ ಹಿಂದೂಸ್ತಾನಿಯಾದರೂ ಸರಿ, ನೇರವಾಗಿ ಎದೆಗೆ ನುಗ್ಗುವ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗಗಳ ಲೇಪ ಒಪ್ಪಿಗೆಯಾಗುತ್ತದೆ. ಪ್ರಯತ್ನವಿರಲಿ.

Post a Comment