ಏನೆಂದು ಹೇಳಲಿ ಗೆಳೆಯಾ, ಅವಳ ಒಲವನು ?
ಮಾಗಿಯಲ್ಲು ಬೆವರುತಲಿರುವೆ ನೆನೆದು ಅವಳನು!
ಏಕಾಂತ ಸೊರಗಿದೆ ಗೆಳೆಯಾ, ಅವಳು ಇರುವೆಡೆ
ಬಾನಿನಿಂದ ಚಂದ್ರನಿಳಿದಾ ಸಿರಿಯ ಮೊಗದೆಡೆ
ಮುತ್ತಿಡುವಾಗೊಮ್ಮೆ ಅವಳ ತುಂಟ ಕಂಗಳು
ಮತ್ತೇನನೋ ಬಯಸುತಿರುವ ಗೀಚು ಕೈಗಳು
ಸೊಬಗಿನಲೆ ಚಿಮ್ಮಿಸುವ ಈ ಪ್ರೇಮ ನಂಬುಗೆ
ಅವಳೆ ಈಗ ನಾನಾಗಿಹೆನು ನನ್ನ ಹೆಮ್ಮೆಗೆ !
ಕಾರಿರುಳಲೆ ಮೀರಿ ಬರುವ ಅವಳ ನೆನಪನು
ಹೇಗೆ ನಿನಗೆ ಹೇಳುವೆನೋ ನಾನು ಅರಿಯೆನು
9 comments:
ಆಕೆಯ ನಿರಂತರ ನೆರಳಿಗೆ
ಈ ಕವನ :
ಒಂದು ಸರಳ ಸುಂದರ
ಭಾವ ಪೂರ್ಣ
ನೆನಪಿನ ಮುತ್ತಿನ ಹಾರ!
ಎದೆಯಿಂದ ನೇರವಾಗಿ ಚಿಮ್ಮಿದ ಒಲವಿನ ಹಾಡು. ಸರಳ, ಸುಂದರ ಹಾಗು ಮಧುರ!
:) ನಿಮ್ಮ ಏಕಾಂತಕ್ಕೆ ಬಹುಬೇಗ ಭಂಗವುಂಟಾಗಲೆಂದು ಹಾರೈಸುವೆನು :) ಒಳ್ಳೆ ಕವನಾ :)
ವಿರಹ ಮತ್ತು ಶೃಂಗಾರ ಭಾವಗಳು ಮೈದಳೆದು ಅರಳಿವೆ.. ತುಂಬಾ ಸುಂದರವಾದ ಕವಿತೆ.. ಪ್ರೀತಿಯ ಭಾವಗಳು ಮನಸ್ಸಿಗೆ ಮುದ ನೀಡಿ ಮನಸ್ಸನ್ನು ಕನಸ್ಸಿನಲ್ಲಿ ಮುಳುಗಿಸುವವು..:)))
Good Poem...
ಏಕಾ೦ತ ಎ೦ಬ ಶಬ್ದವೇ ಇಲ್ಲಿ ಶ್ರ೦ಗಾರ.. ಚೆನ್ನಾಗಿದೆ...
nice lines
Swarna
ಈಶ್ವರ್ ಸರ್.. ಮಾಗಿಯಲ್ಲೂ ಬೆವರಿಳಿಸೋ ಚಂದ್ರನಿಳಿದಾಸಿರಿಯ ಮೊಗದ ಗೀಚುಕೈಗಳ ಸುಂದರಿಯ ನೆನಪಿಸಿಕೊಂಡ್ ಪರಿ ಚನ್ನಾಗಿದೆ...
ಸರಳ ಪ್ರೇಮದ ಅನಾವರಣ ಕಂಗಳಿಂದ ಮುತ್ತಿಡುವ ಪ್ರತಿಮೆ ವಿನೂತನ!
Post a Comment