ಅಲ್ಲೆಲ್ಲೋ ಅಡಗಿದ್ದ ಬೆಂಕಿಯನ್ನು ತಿಂದು
ಕಲ್ಲಿದ್ದಲು ಮಾಡಿದ ನಿನ್ನ ತಾಕತ್ತನ್ನು
ಸುಳ್ಳು ಎನ್ನಲಾರೆ!
ನಿಲ್ಲು! ಒಂದಿಷ್ಟು ಪರಮಾನ್ನವೋ
ಅಲ್ಲ ಪಾಯಸವೋ ಕಟ್ಟಿಕೊಟ್ಟು
ಗಂಟಲಿಗೇರುವ ಉಪ್ಪಿನಕಾಯಿಯ ಗುಟ್ಟು
ಬಿದ್ದಲ್ಲಿಗೇ ಒಂದು ಕೋಪದ ಏಟು
ಇನ್ನೊಂದು ಬೀಳುವಾಗೊಮ್ಮೆ ನೀ ಇತ್ತ ಸಾರೋಟು!
ಮರೆಯಲಾರೆ.
ಚೆಲ್ಲಿದ ಚಿಲ್ಲರೆ ಕಾಸು, ಬಳೆಯ ಚೂರು
ಬಾಳೆ ಹಣ್ಣು, ಮತ್ತೇನೌಷಧಿಯ ತೊಗಟೆ!
ಮಳೆಯ ದಿನದ ಕತ್ತಲಲ್ಲಿ
ಎಲ್ಲವನ್ನೂ ಮೆಟ್ಟಿ ಜಾರಿ ಬಿದ್ದಾಗ
ಈ ಕಾಸು, ಸಿಪ್ಪೆ, ಚೂರುಗಳನ್ನ ಆಯಲಾಗದೇ
ಎಲ್ಲವೂ ಮಣ್ಣು ಎನ್ನಲಾರೆ.
ಕಿಲುಬಿಗಂಟಿದ ಮಣ್ಣು ತೊಳೆದುಕೊಡು,
ಬಾಳೆಯ ಪುಳ್ಳೆಗಳನ್ನ ಪೊರೆವಂತೆ ಮಾಡು
ತೊಗಟೆ ಜಾರದ ಹಾಗೆ ಕಟ್ಟು ಕಾವಿಯ ಪಂಚೆ!
ಗೀರುತ್ತಿರಲಿ ನಿನ್ನ ಹದಿಬದೆಯ ಬಳೆಯ ಚೂರು.
3 comments:
ಸತ್ಯ :)
ಸ್ವರ್ಣಾ
ವಾಹ್!
ಆ ತೊಗಟೆ ಜಾರದ ಹಾಗೆ ಕಾಪಾಡುವ ಕಾವಿಯ ಪಂಚೆಯ ಹಿಂದೆ ಏನೇನು ಅರ್ಥವಾಗದ ಲೌಕಿಕಗಳಿದೆಯೋ?
ಕಿರಣರ ಈ ಕವನ ನನಗೆ ತುಂಬಾ ಓದಿಸಿಕೊಂಡಿತು. ಇಷ್ಟವಾಯಿತು.
Post a Comment