ಅಮ್ಮ ಹೀಗೇಕೆ,
ಇಷ್ಟು ಹೆತ್ತರೂ , ಕರೆಗಾಳಿ ಗೀರಿದರೂ
ತೊಗಟೆಯಿಂದೊಡೆವ ಮಕ್ಕಳು
ನಿನ್ನ ಹಳದಿ ಎಲೆಗಳನ್ನ ನೋಡಿ ಕನಿಕರಿಸುವುದಿಲ್ಲ.
ಅವನು ಗಾಳಿ,
ಎಷ್ಟೊ ಮರಗಳ ಮೈದಡವಿ ಹೋದರೂ
ಮುಪ್ಪಿಲ್ಲವಂತೆ.
ಹೆತ್ತ ಹೆಂಗಳೆಯಂತೆ ಮೈಯ್ಯೂ ಸುಕ್ಕುಗಟ್ಟುವುದಿಲ್ಲ
ಜಂಭ ಅವಗೆ!
ಹೀಗೇ, ತಿರುತಿರುಗಿ, ಕೊನೆಗೆ
ಮನೆಯ ಬಾಗಿಲು ತಟ್ಟೆ
ಹಿತ್ತಿಲಿನ ಬಾಗಿಲು ಮುಚ್ಚಿದಂತೆ ಅನಿಸಿ
ಗಾಬರಿಗೊಂಡಿದ್ದೇನೆ.
5 comments:
ಕನಿಕರ ಅದು ದೈವಿಕ. ಇಂದು ಹಾದದ್ದು ನಾಳೆಗೆ ಬರೀ ಮರೆತ ಹಾದಿ!
ಇಂತ ರಚನೆಗಳಿಂದ ನಮಗೆ ನೀವು ತುಂಬಾ ಎತ್ತರ ಕಾಣುತ್ತೀರಿ.
ಇತ್ತೀಚಿಗೆ ನಿಮ್ಮ ರಚನೆಗಳ ವಿಷಯ ತುಂಬಾ ವಿಭಿನ್ನ ವಾಗಿದೆ.
ಹಾಗಂತ ಪ್ರೀತಿ ಪ್ರೇಮದ ವಿಷ್ಯ ಬಿಡಬೇಡಿ :)
ಸ್ವರ್ಣಾ
ಇದೂ ಇರಲಿ; ಸ್ವರ್ಣಾ ಅವರು ಹೇಳಿದ್ದೂ ಬರಲಿ!
ಅವನು ಗಾಳಿ,
ಎಷ್ಟೊ ಮರಗಳ ಮೈದಡವಿ ಹೋದರೂ
ಮುಪ್ಪಿಲ್ಲವಂತೆ.
ಹೆತ್ತ ಹೆಂಗಳೆಯಂತೆ ಮೈಯ್ಯೂ ಸುಕ್ಕುಗಟ್ಟುವುದಿಲ್ಲ
ಜಂಭ ಅವಗೆ!
ನೂರಕ್ಕೆ ನೂರರಶ್ಟು ನಿಜ ಕಿಣ್ಣಣ್ಣ ...
ಅಮ್ಮ ಎಂದಿಗೂ.. ಬದಲಾಗದ ಪಾತ್ರ.ನಿಸ್ವಾರ್ಥ ಪರಂಪರೆಯ ಭಾವ ಜೀವ. ತಾನು ಮುಳ್ಳಿನ ಮೇಲೆ ನಿಂತು ನಮ್ಮನೆದೆಗಾನಿಸುವ ಮಮತೆ.. ಎಂದಿಗೂ ನಮ್ಮ ಕೈ ನೋಡದೇ ನಮ್ಮ ಬಾಯಿಯನ್ನು ನೋಡುವ ಅಮ್ಮ.. ನಮ್ಮ ಬಾಯಿಯಲ್ಲಿ ತಿನಿಸು ಇಲ್ಲದಿದ್ದರೆ ನಗುವಾದರೂ ಇದ್ದೀತೇ?
Post a Comment