ಬಾಗಿಲು ತೆರೆದ ದನಿ ಕೇಳಿಸಿತು
ಒಳನಡೆದೆ, ಹಿತದ ಕತ್ತಲು
ಕೇಳಿದೆ; ಯಾರಿಲ್ಲಿ?
ಬಾ ಮಗನೇ ಬಾ, ನೋಡು
ಇದು ಕಂಬ, ಇದು ಮಾಡು,
ಇದು ನನ್ನ ಗೂಡು.
ಒಳಗಿದೆಯೊ ಒಂದಿಷ್ಟು ಹಳೆಯ ಮಡಕೆಯ ಚೂರು!
ಆರಿಲ್ಲವಿನ್ನೂ ನೆತ್ತರು. ಪುನಃ ಇಹುದೆ ಚಿಗುರು?
-
ಹೊರಗೆ ಮಳೆಯಾದಂತೆ ಸದ್ದು,
ಹನಿ ಬಿದ್ದರೆ ಸಾಕು, ಜಗ್ಗನೇಳುವ ಬೀಜ
ಇನ್ನೇನು ಕಳವಳಿಕೆ?
ಹೊರಗೆ ಬಂದೆ.
ನಾಳೆ ಬಂದೀತೆಂದು ಹೊಸತು ಮೊಳಕೆ!
3 comments:
ನಾಳೆ ಸದಾ ಜೀವಂತವಿರುವ ಮೊಳಕೆ.
"ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ "
ಚೆನ್ನಾಗಿದೆ ಭಟ್ರೇ.
ಸ್ವರ್ಣಾ
ಬದುಕಿನ ಆಶಯಗಳು ಚೈತನ್ಯ ಪೂರ್ಣವಾದಾಗ ಮೊಳಕೆ ಸಿದ್ಧಿಯೂ ಶತಸಿದ್ಧ. ಒಳ್ಳೆಯ ಕವನ.
ತುಂಬ ಒಳ್ಳೆಯ ಕವನ, ಭಟ್ಟರೆ.
Post a Comment