"ನನ್ನ ಒಲವಿನ ಮಾತು ಕೇಳಿ ನಸುನಕ್ಕಳು
ನಿನಗೂ ಪ್ರೀತಿಯೆ ಹುಡುಗ? ಎಂದಳವಳು!
ಏನೆಂದು ಉತ್ತರವ ಬಯಸಿದಳೋ ಅವಳು
ಪ್ರೀತಿಯೆಂದರೆ ಕನಸು ಎಂದೆ ನಾನು!
ಕನಸು ಎಂದರೆ ಸಾಕೆ, ಕನಸೊಳೇತಕೆ ಇರುವೆ
ಕನಸಲ್ಲಿ ಬರುವೆನೇ? ಕೇಳ್ದಳಾಕೆ!
ಕನಸಿನೊಳು ಕಂಡಿಲ್ಲ, ಕನಸೆಂದುಕೊಂಡಿಹೆನು
ಎನುವ ಉತ್ತರ ಕೊಟ್ಟೆ! ಮುನಿದಳಾಕೆ.
ಸುಮ್ಮನಿರು ಮೌನದಲಿ, ನಾನು ಮಾತಾಡೆನು
ಎನುವ ಬಿಂಕದಿ ಅವಳು ನೋಡಲೆನ್ನ.
ಕಣ್ಣುಗಳ ನೋಡುವುದು, ಸುಮ್ಮನೇ ಕೆಣಕುವುದು
ಮತ್ತೆ ಮಾತಿಗೆಳಸುವುದು; ಏನು ಚೆನ್ನ!
ನಾಳೆ ಬರುವೆನು ಎಂಬ ಮಾತಿನೊಳಗಡೆ ಬೇನೆ
ಬೇಡ ಹೋಗದಿರೆಂಬ ಭಾವ ಮನದಿ
ನಿನ್ನಲ್ಲೇ ಇರುವೆನು ಎಂದೆನುವ ಧನ್ಯತೆಯು
ಒಲವು ಹರಿಸುವ ಅವಳೆ ಜೀವದನದಿ."
9 comments:
ನಾಳೆ ಬರುವೆನು ಎಂಬ ಮಾತಿನೊಳಗಡೆ ಬೇನೆ
ಬೇಡ ಹೋಗದಿರೆಂಬ ಭಾವ ಮನದಿ
ನಿನ್ನಲ್ಲೇ ಇರುವೆನು ಎಂದೆನುವ ಧನ್ಯತೆಯು
ಒಲವು ಹರಿಸುವ ಅವಳೆ ಜೀವದನದಿ."
ಸೂಪರ್ :)
ಆಹಾ, ಎಂತಹ ಅದ್ಭುತ ಕಲ್ಪನೆ! ಕಲ್ಪನೆಗೆ ತಕ್ಕ ರಚನೆ.
ವೊವ್ .....ಸೊಗಸಾದ ಕವನ..ಎಲ್ಲಾ ಸಾಲುಗಳು ಇಷ್ಟ ಆದವು.....ಕೊನೆಯ ನಾಲ್ಕು ಸಾಲುಗಳು ಸೂಪರ್.....ಅಭಿನಂದನೆಗಳು.....
nice one!! Preeti ,olavu haageye :)
ishtavaayitu preetiya bhaava :)
ಹೊಸ ತರ ಇದೆ.. ಶೈಲಿ ಬದಲಾಯ್ತಾ ?
ಅಣ್ಣಾ,
ಚೆನಾಗಿದೆ ಕವನ...
ಸರಳ ಶಬ್ಧಗಳನ್ನು ಬಳಸುವ ರೀತಿ ಇಷ್ಟವಾಯ್ತು..
ಬರೆಯುತ್ತಿರಿ :)
ನಮಸ್ತೆ..
ಅಬ್ಬಬ್ಬ ಜೀವ ನದಿ ಅಂತೂ ಸಿಕ್ಕಿತು ನಿಮಗೆ.ಇನ್ನು ಹರಿಯಲಿ ಪ್ರೇಮ ಧಾರೆ
ಸರಸ ಸಂಭಾಷಣೆಯ ಮೂಲಕ ಸುಲಲಿತವಾಗಿ ಸಾಗಿ ಹೋಗುವ ಈ ಪ್ರೇಮ ಕಾವ್ಯದಲ್ಲಿ, ಪದಗಳ ಬಳಕೆಯ ನೈಜತೆಯು ಮೇಳವಿಸಿದೆ.
ತುಂಬಾ ಚೆನ್ನಾಗಿದೆ ..ಅದ್ಭುತ ಸಾಲುಗಳು....ಕಲ್ಪನೆ ಸಂಭಾಷಣೆ ತುಂಬಾ ವಿಸ್ಮಯಕಾರಿಯಾಗಿದೆ...
Post a Comment