ಸುಗ್ರಾಸ ಭೋಜನ,
ತಂಪಿದ್ದ ಉದರ, ಕಂಪಿನ ಕೋಣೆಯದು
ಮತ್ತೆ ಮೆಲ್ಲನೆ ಮೆತ್ತೆ, ಬಳಿಯಿತ್ತು ಕವನ
ಬೆಚ್ಚಿದ್ದೆ ಅದರೊಳಗೆ ಇರುವ ಹೂರಣ ಕಂಡು
ಎಲ್ಲೊ ಕಳೆದೋದಂತೆ ,
ತಲೆತಿರುಗಿ, ಕಣ್ ಮುಚ್ಚಿ ತಲ್ಲೀನನಾದೆ!
ಸತ್ಯದರ್ಶನವಾಯ್ತು, ತಿರುಗಿ ಎದ್ದೆ
ರಸಭಂಗ ಏಕಾಯ್ತು
ಹುಚ್ಚಿತ್ತು ಶಾಂತಿಯದು, ವಿಶ್ವಪ್ರೇಮದ ಒಲವು
ಮತ್ತೇನೋ ಮತ್ತೇರಿಸುವ ಒಳ್ಳೆ ಬದುಕಿನ ಕನಸು.
ಇಷ್ಟೆಲ್ಲ ಅಧ್ಯಯನ, ಮತ್ತೆ ಒಳ್ಳೆಯ ಚಿಂತೆ!
ತಿಳಿದೀತೆ ಸೊಳ್ಳೆಗದು ಕಚ್ಚಿತ್ತು ಮತ್ತೆ !
ಸತ್ಯದನ್ವೇಷ ಉನ್ಮಾದ ಎಲ್ಲ ನೆನೆಸುವ ಮುನ್ನ
ಹೊಡೆದ ಪೆಟ್ಟಿಗೆ,
ಸೊಳ್ಳೆ ಸತ್ತಿತ್ತು, ಹೀರಿದ ನೆತ್ತರ ಕಕ್ಕಿ..
ಕವನ ಮಡಿಚಿಟ್ಟೆ, ಚಾದರದೊಳಗೆ ನಾನೆ ಬಂದಿ
10-08-2011
2 comments:
ನೈಜತೆಯನ್ನು ಬಲು ನಾಜೂಕಾಕಿ ಕಟ್ಟಿಟ್ಟ ಕವನ.. ವಿಷಯ ವಿಸ್ತಾರ ಅತೀ ಕುತೂಹಲಕಾರಿಯಾಗಿ ಮೂಡಿ ಬಂದಿದೆ ಸರ್ .. :)
ಜೀವ ಹಿಂಡುತಾವೆ
ನಿದ್ರೆ ಕಿತ್ತುಕೋತಾವೆ
ಸೊಳ್ಳೆ ಯಮ ಭಂಟರೇ?
Post a Comment