ಹುಟ್ಟು ನಾ ಬಯಸಲಿಲ್ಲ
ಸಾವು ನಾ ಕಾಣಲಿಲ್ಲ
ನಡುವೆ ನೋವಿನೆಳೆಗಳಿಂದ ಇಳಿದ ಮೌನ
ಬೆಂಕಿಯೆದುರು ರೆಕ್ಕೆ ಸುಟ್ಟೆ
ಮಳೆಯ ಎದುರು ಕೊಚ್ಚಿ ಹೋದೆ
ಬೆಳೆಸಿ ಬೇಯಲಿಲ್ಲ ಬಿತ್ತದ ಗಾನ
ಪಡೆಯಲಾರೆ ಮೇಲೆ ಹೂವ
ಬಯಸಲಾರೆ ನೆಲದ ನೋವ
ಮಧ್ಯ ಸಿಲುಕಿ ಸುಮ್ಮಗುರಿವ ಯಾನ
ಚಿತ್ತದೊಳಗೆ ನೂರು ಭೀತಿ
ಭೀತಿಯೆನಿತೊ ಅಷ್ಟೆ ಪ್ರೀತಿ
ಸುಂದರತೆಯ ಭಾವವಿಲ್ಲಿ ವಿಷ ಯಾನ !!
೧೨-೦೮-೨೦೧೧
2 comments:
ಸಾಲುಗಳು ಅರ್ಥಪೂರ್ಣವಾಗಿವೆ.. ಧನ್ಯವಾದಗಳು..
"ಬೆಳೆಸಿ ಬೇಯಲಿಲ್ಲ ಬಿತ್ತದ ಗಾನ"
ಉತ್ತಮ ಭಾವಗಳು ಹೊಮ್ಮಿಸುವ ಕವನ ಸಾರ್, ಭೇಷ್...
Post a Comment