ಮಣಿಪಾಲದಿಂದ ಶಿವಮೊಗ್ಗೆಗೆ
ಬರುವಾಗೊಮ್ಮೆ ಬ್ರೇಕು
ತೀರ್ಥಹಳ್ಳಿಯಲಿ.
ಆಗುಂಬೆಯ ಮುಕ್ಕಾಲು ನೋವಿಗೆ
ಬಸ್ಸಿನ ಕಾಲುನೋವು ಸೇರಿ
ಪರಿಪೂರ್ಣ ಒಂದು.
ಸಿಗರೇಟು ಖಂಡಿತ ಬೇಡವಿತ್ತು
ಎನ್ನುತ್ತಾ ಖರೀದಿಸುವಾಗ
ಬಸ್ಸು ಹೊರಟಿದ್ದು ಸರಿ, ನನಗಲ್ಲ, ಡೈವರನಿಗೆ.
ಬೆಂಕಿ ಹತ್ತಿಸಲಾರದೆ
ಜೇಬಿಗೆ ತುರುಕಿ ಬಸ್ಸಲ್ಲೆ ಕುಳಿತೆ.
ಸಿಗರೇಟು ಒಳ್ಳೆಯದಲ್ಲ ಎಂಬುದು ಅವಳ ವಾದ.
ಬೆಂಕಿ ಒಳ್ಳೆಯದಲ್ಲ ಎನ್ನುವುದು ನನ್ನ ವಾದ.
ಕೊನೆಗೂ ತೀರ್ಥಹಳ್ಳಿಯ ಸಿಗರೇಟು
ಇನ್ನೂ ಹಸಿಯಾಗಿಯೇ ಇದ್ದು
ಹಾನಿಕಾರಕವಲ್ಲ! ನಿರ್ವಿವಾದ.
೨-೧೨-೧೨
5 comments:
ಈ ಸಿಗರೇಟು ಕಿರಣರೇ ಹುಡುಗಿಯಂತೆಯೇ.
ತಾನಷ್ಟೇ ಸುಡಳು ನಮ್ಮನ್ನೂ ಸುಡುತ್ತಾಳೆ ವಿರಹ ತಾಪದಲ್ಲಿ.
ಚೆನಾಗಿದೆ ಸರ್...
ಹಾಂ ಮೊನ್ನೆ ಓದಿದ ಒಂದು ಸಾಲು ನೆನಪಾಯ್ತು...
ಬಿಡಲಾರೆ ನಾ ಸಿಗರೇಟು
ಹುಡುಗಿ,ನಿನ್ನಂತೆಯೇ ಅದು ಥೇಟು
ಬಿಡಬಲ್ಲೆನೇ ನಾ ನಿನ್ನ?
ಚಿನ್ನ,ಹಾಗೆಯೇ ಸಿಗರೇಟನ್ನ
.....
......
-ಬಿ.ಆರ್.ಲಕ್ಷ್ಮಣರಾವ್
ರಂಜಕವಾದ ಲಹರಿಯ ಈ ಕವನವನ್ನು ಖುಶಿಯಿಂದ ಓದಿದೆ!
ಒಟ್ಟಿನಲ್ಲಿ,
‘ಹೆಂಡತಿ ಇಲ್ಲದಾಗ ಸಿಗರೇಟು
ಸಿಗರೇಟು ಇಲ್ಲದಾಗ ಹೆಂಡತಿ’
ಎನ್ನುವ formula ಸರಿಯಾದೀತು, ನೋಡಿ!
ಕಿಣ್ಣಾ ... ಸಿಗರೆಟೆಲ್ಲ ಬ್ಯಾಡದೋ .... ಕೂಸ್ನ ಹುಡ್ಕ್ಯ ಸಾಕು... ;)
Post a Comment