Friday, January 18, 2013

ನೆನೆದಾಗ ಕರೆವವಳು, ಚಂದಿರನ ನಗೆಯವಳು


ನೆನೆದಾಗ ಕರೆವವಳು, ಚಂದಿರನ ನಗೆಯವಳು
ಮುನಿಸು ತೋರಿದಳೊಮ್ಮೆ ಸಂಜೆಯಲ್ಲಿ!
ಈ ನಿಶೆಯು ಬಿರುಮೌನ; ಕೊರೆಯುತಿದ್ದವು ಮಾತು
ಮಲ್ಲೆ ಬಿರಿದಿತು ದಿನದ ಬೆಳಗಿನಲ್ಲಿ.

ಬೆಳಗಿನಲೆ ಕಂಡವಳು ಕಪ್ಪು ಮೋರೆಯ ಕಂಡು
ಕೇಳಿದಳು ಬೇಸರದ ಕಾರಣವನು!
ಏನಿಲ್ಲ ಎಂದೆನುತ ಅವಳ ಒಲುಮೆಗೆ ಮಣಿದು
ಅವಳನ್ನೇ ನೋಡುತಲಿ ನಿಂತೆ ನಾನು.

ಕಾರಣವು ಇಲ್ಲದೆಯೆ ಸಿಡುಕಿದರು ನನ್ನವಳು
ಕಾರಣವು ಬೇಡದೆಯೆ ಪ್ರೀತಿಸುವಳು!
ಹೀಗೆನುತ ನಾವಿರಲು; ಮತ್ತೇನು ಬೇಕೆಮಗೆ
ಅವಳಿಗಾಗಿಯೆ ನಾನು ನನಗೆ ಅವಳು.

4 comments:

Badarinath Palavalli said...

ಹೀಗೆ ಪರಸ್ಪರ ಒಲುಮೆಯಾಟ. ತುಂಬಾ ನೆಚ್ಚಿಗೆಯಾಯ್ತು.

prashasti said...

ಮತ್ತೆ ಪ್ರೀತಿಯ ಟ್ರಾಕಿಗೆ ಕಿಣ್ಣ :-)
ಚಂದ ಇದ್ದು :-)

prashasti said...

ಮತ್ತೆ ಪ್ರೀತಿಯ ಟ್ರಾಕಿಗೆ ಕಿಣ್ಣ :-)
ಚಂದ ಇದ್ದು :-)

ಮೌನ ವೀಣೆ said...

ಚೆನ್ನಾಗಿದೆ. ಬರೆಯುತ್ತಿರಿ.