Monday, December 2, 2013

ಮಲ್ಲೆಯಿಲ್ಲದ ದಿನ!

ಅವಳ ಕಣ್ಣೀರನ್ನು ಕಾಣದವನೇನಲ್ಲ;
ಕಣ್ಣೀರಿಗೂ ಉಂಟು ಮಲ್ಲೆ ಮಾತು.
ಮಲ್ಲಿಗೆಯ ದಂಡೆಯಲಿ ಹೂ ವಿರಳವಾದಂತೆ
ಕೇಳ್ದರೆನ್ನಯ ದನಿಗೆ ಏನಾಯಿತು?

ಹೂದಂಡೆ ಕಟ್ಟುವುದು ಸುಲಭಸಾಧ್ಯವೆ ಹೇಳಿ
ಎಲ್ಲದಿಕ್ಕಿಗೆ ಹೂವು ಒಲಿಯಬೇಕು;
ಹೂವರಳದ ದಿನಗಳಲಿ ಒಡಕು ಸೊಪ್ಪುಗಳಲ್ಲಿ
ಮಾಲೆಯನು ಹಣೆಯುವುದು ಒಂದು ಸೊಕ್ಕು!

ಎಂಥ ಮಾಲೆಯೊ ನಲ್ಲ! ಎನ್ನುತಲಿ ಮುತ್ತಿಡುವ
ಆತ್ಮತೋಷವ ಮಾಲೆ ತೋರಬೇಕು.
ಇಲ್ಲವಾದರೆ ಹೀಗೆ ಮಲ್ಲಿಗೆಯು ಇಲ್ಲೆನುತ
ಅವಳ ಕಣ್ಣೀರನೇ ಸುಖಿಸಬೇಕು.

2 comments:

prashasti said...

Ummaha.. Aatmatosha.. Abba !

sunaath said...

ಒಲವಿನಾ ಕಂಪು ತಾ ತುಂಬಿರಲು ಮನದಲ್ಲಿ
ಮೊಲ್ಲೆ ಮಾಲೆಯೆ ಬೇಕೆ, ತೊಡಿಸಲಿಕ್ಕೆ?
ಮುತ್ತಿನ ಮಾಲೆಯನೆ ಬಳಸುವರು ಕವಿಗಳು
ಮೊಲ್ಲೆ ಇದ್ದರು ಕೂಡ ಬೇಕು ಏಕೆ?

ಸೂಚನೆ: ನೀವು ಎರಡೂ ಮಾಲೆಗಳನ್ನು ಬಳಸಬಹುದು!