Tuesday, December 21, 2010

ಬಾಲಿಶ ಕವನಗಳು !! 1

ಅಂದೆಂದೋ ನೀ ಕೊಟ್ಟ ಮಾತು ಮುದ್ರಿಕೆಯಂತೆ
ಅನುರಣಿತವೀ ನನ್ನ ಎದೆಯ ಒಳಗೆ
ನಿನ್ನ ಪ್ರೇಮದ ಮಾತು ಕಾಯುವುದು ನಾನೀಗ
ಬಾರೆಯಾ ನೀನೀಗ ನನ್ನ ಬಳಿಗೆ

ಎಲ್ಲ ಜೀವದ ಭಾಷೆ ಪ್ರೀತಿಯೇ ಧರೆಯೊಳಗೆ
ಕಲ್ಲಂತೆ ಒಲವಿರದ ಎದೆಗೋಪುರ !
ನೀನೆ ನನ್ನೊಲ ಜೀವ ನಿನ್ನುಸಿರೆ ನನ್ನುಸಿರು
ಈಗಿಲ್ಲ ನೀನಿರದೆ ಬಲು ಬೇಸರ

ನಿನ್ನ ಒದನಾಟವನು ಕಾತರಿಸುತಿಹೆನಿಂದು
ನಿನ್ನ ನೆನಪಿನ ಮಳೆಯ ಧಾರೆಯಲ್ಲಿ
ನೆನಪಿರಲಿ ನಿನಗೆಂದೂ ಈ ಪ್ರೀತಿ ನುಡಿಯೆಲ್ಲ
ಕಣ್ಣಂಚು ಮುತ್ತುಗಳೇ ಮಾಲೆಯಿಲ್ಲಿ

ಎಂದೋ ಅರಳಿದ ಹೂವು ಬಾಡದಿದೆ ಎದೆಯಲ್ಲಿ 
ಅಳುವಿನಲ್ಲಿ ನಗು ಹೊಮ್ಮಿಸೋ ಪ್ರೇಮವೇ
ನಗುವಿನೊಳನಗುವಾಗಿ ಹೂವಿನೊಳಮನಸಾಗಿ
ನೀ ಬಾರೋ ಅಳಿಸದಿರು ಓ ಜೀವವೇ

೨೮ / ೦೨ / 2005

2 comments:

Anitha a said...

balishavagilla ee kavana

ಮಂಜಿನ ಹನಿ said...

ಪ್ರೀತಿಯ ಭಾವಗಳು ಸರಾಗವಾಗಿ ಹರಿದಿವೆ ಈಶ್ವರಣ್ಣ.. ಹರಯದ ಪ್ರೀತಿಯಲ್ಲಿನ ಮುಗ್ಧ ಭಾವಗಳು ಸುಂದರವಾಗಿ ವ್ಯಕ್ತವಾಗಿವೆ.. ಅಸ್ವಾದನೆಗೆ ತುಂಬಾ ಚೆಂದವೆನಿಸುವ ಭಾವ ಸ್ಪುರಣದ ಸಾಲುಗಳು, ಲಯದೊಂದಿಗೆ ಓದಿಸಿಕೊಂಡಿವೆ..:))) ಹಿಂದಿನ ನಿಮ್ಮ ಬರವಣಿಗೆಯ ಶೈಲಿಗು, ಈಗಿನ ಶೈಲಿಗು ತುಂಬಾ ವ್ಯತ್ಯಾಸವಿದೆ.. ಒಬ್ಬ ಕವಿಯಾಗಿ ಪಕ್ವತೆ ಸಾಧಿಸಿಕೊಂಡಿದ್ದೀರಿ ಈಗ, ಪ್ರೌಢಿಮೆಯ ಮೆರುಗು ಬಂದಿದೆ.. ನಿಮ್ಮ ಈಗಿನ ಕವಿತೆಗಳನ್ನು ಓದುವುದೇ ಒಂದು ಸೊಗಸು..:)))