ನಿನ್ನ ನಗುವು ಸೆಳೆಯಿತೆನ್ನ
ನದಿಯ ಹಾಗೆ ಮೊರೆಯುವುದು
ಮನದ ಶಬ್ದ ಅಡಗುವುದು ಇದೇನೇ ಪ್ರೇಮ ?
ನಿನ್ನ ನೋಟ ಇರಿಯಿತೆನ್ನ
ಬನದಿ ಹೂಗಳರಳುವುದು
ಏನೋ ಭಾವ ಹೊರಳುವುದು ಇದೇನೇ ಪ್ರೇಮ ?
ಒಂದು ಸಂಜೆ ಏಕೋ ಗಾಳಿ ಬೀಸುತ್ತಿತ್ತು ಹೂಗಳೆಡೆಗೆ
ಮನದ ದೋಣಿ ವಾಲುತ್ತಿತ್ತು ಸರೋವರದ ಕಡೆಗೆ
ಕಂಡೆ ನಾನು ಅಲ್ಲೇ ಹೂವು ನೀರ ನಡುವೆ ತಾವರೆ
ಕರೆಯಿತೆನ್ನ , ಒಲವಿದೆನ್ನ ಬಳ್ಳಿಗಿಲ್ಲಿ ಆಸರೆ
ಮಾತು ಗಗನ , ಮೌನದಾಚೆ ಎಲ್ಲೋ ಮಿಂಚುತ್ತಿತ್ತು
ಹೊಳೆವ ತಾರೆ ಪೂರ್ಣ ಶಶಿಗೆ ಕಣ್ಣು ಕರಗುತ್ತಿತ್ತು
ಮನದ ಮಾತು ಹೇಳ ಬಯಸಿ ಬಂದೆ ನಾನು ಇಲ್ಲಿಗೆ
ಏಕೆ ಹೇಳೆ ಕಡಲ ಮೌನ ಇಲ್ಲವೇಕೆ ಕಿರುನಗೆ ?
ಹರೆಯ ಹೂವು ಪ್ರೀತಿಯುಸಿರ ಪಡೆದು ಹೀಗೆ ಬದುಕಿದೆ
ನಿನ್ನ ಒಲವು ಕಾಯುವುದು , ಅಲ್ಲೇ ಏನೋ ಗೆಲುವಿದೆ
ಹರಿವ ನದಿಯ ನಗುವ ನಡುವೆ ನಿನ್ನ ಪ್ರೇಮ ಕಂಡೆನು
ಬಳಸಿ ಬರುವ ಅಲೆಗಳಿಂದ ಪ್ರೀತಿ ಮುತ್ತ ತಂದೆನು !
ಪ್ರೇಮವಿರದ ಬದುಕು ನರಕ , ಬಾಳಿಗಿಲ್ಲಿ ಬೇಸರ
ಒಲಿದು ನೀನು ಬಾರೆ ,ಪ್ರೇಮ ಬರಲಿ ತೊಡೆದು ಕಾತರ
ಇರಲಿ ಪಯಣ ಇರುವವರೆಗೆ ಪ್ರೇಮವಿಲ್ಲಿ ದೀಪವು
ನೀನೆ ದೀಪ ನೀನೆ ಬೆಳಕು , ಬಾಳ ಕಾವ್ಯ ಅಮರವು
೦೭/೧೨/2005
3 comments:
chennagide
ಪ್ರೀತಿಯ ಕಿರಣ ಕಾಣದಾದಳೆ ಸಖಿ ?
ಪ್ರೀತಿಯ ಕಿರಣ ಕಾಣದಾದಳೆ ಸಖಿ ?
Post a Comment