ಮೋಡ ಚದುರಿದ ಗಗನ
ಕತ್ತಲೆಯ ಛಾಯೆಯಿದೆ ಬೆಳಕ ಹಿಂದೆ
ಮರದ ಗೂಡುಗಳಿಂದ
ಹಕ್ಕಿಗಳ ಉಲಿಯಿಲ್ಲ
ಬೇಸರದ ಭಾವವಿದೆ ಮನದ ಮುಂದೆ
ಎಲ್ಲೋ ಮಿಂಚಿನ ಬೆಳಕು
ಎಲ್ಲೋ ಮನಸಿನ ಅಳುಕು
ಬಾರನೇ ಶಶಿ ಇರುಳು ಸಂಜೆ ದೂಡಿ
ಕಾಯುತಿಹೆ ಪ್ರತಿ ದಿನವು
ನೆನಪೆಂಬ ಜಿನಿ ಮಳೆಗೆ
ಮನಸಿನೊಳ ಬಯಕೆ ರಾಡಿ
ಹಳೆಯ ಪುಟಗಳ ನಡುವೆ
ಹೊಸದೊಂದು ಅಧ್ಯಾಯ
ಈಗ ನಾ ಬರೆಯಲಾರೆ
ನಿನಗಾಗಿ ಹಂಬಲಿಸೋ
ಈ ಹುಚ್ಚು ಮನಸಿಗೆ
ನಾ ಬೇಡಿ ತೊಡಿಸಲಾರೆ
ISHWARA BHAT K
08.12.2004
2 comments:
ತುಂಬಾ ಚೆನ್ನಾಗಿದೆ
ಹಳೆಯ ಪುಟಗಳ ನಡುವೆ
ಹೊಸದೊಂದು ಅಧ್ಯಾಯ
ಈಗ ನಾ ಬರೆಯಲಾರೆ
ನಿನಗಾಗಿ ಹಂಬಲಿಸೋ
ಈ ಹುಚ್ಚು ಮನಸಿಗೆ
ನಾ ಬೇಡಿ ತೊಡಿಸಲಾರೆ
ಕೊನೆಯ ಪದ್ಯದ ಈ ಸಾಲುಗಳು ತುಂಬಾ ಚೆನ್ನಾಗಿವೆ..
ಬಿಡುವಾದಾಗ ನನ್ನ ಬ್ಲಾಗಿಗೂ ಒಮ್ಮೆ ಬೇಟಿಕೊಡಿ.
Post a Comment