ನಿಲುವನೋ ಮನದೊಳಗೆ ಹರ-ತಾ
ಗೆಲುವನೋ ಜಗದೊಲವನು
ಚೆಲುವೆ ಗಿರಿಜೆಯ ಮನವ ಕದ್ದವ
ಬಿಲ್ವಕೇ ನಮಗೊಲಿವನು!
ನಂದಿವಾಹನನೀತನನು ಆ-
ನಂದದಿಂದಲಿ ಭಜಿಸಲು
ಬಂದು ಕಳೆಯುವ ಮನದ ಕ್ಷೇಷವ
ಇಂದಿನಾ ದಿನ ಹಾಡಲು
ನಾದದುಂದುಭಿ ಮೊಳಗುವೆಡೆಯಲಿ
ಮೋದದಿಂದಲಿ ಕುಣಿವನು
ಕಾಯ್ದು ಕರುಣದಿ ಪೊರೆವನೈ-ಕ
ಲ್ಲಾದ ರೂಪದಿ ತೋರ್ಪನು.
ಶಿವನು ಚರ್ಮಾಂಬರನು ಸಕಲರ
ಭವದ ಬಂಧನ ಕಳೆಯುಲಿ
ಶಿವನ ನುತಿಸುತ ದಿನವ ಕಳೆಯಲು
ಭುವನ ಅನುದಿನ ಬೆಳಗಲಿ.
3 comments:
ಇಂತಹ ಭಕ್ತಿಭರಿತ ಗೀತೆಯನ್ನು ನೀವು ಬರೆಯಬಹುದು ಎಂದು ಅನಿಸಿರಲಿಲ್ಲ!
ಪ್ರೇಮ ಕವಿಗಳು ಭಕ್ತಿ ಗೀತೆಯನ್ನು ಬರೆಯುತ್ತಾರೆ ..ಚೆನ್ನಾಗಿದೆ ಭಟ್ರೇ
Enna fav ishwarana hadu mastiddu anna :)
Post a Comment