Saturday, March 31, 2012

ನಾನು ಅವಳು !


ನಗುವಲ್ಲೆ ಸಿಕ್ಕಿರುವ ಅವಳ ನಾನು ನಗಿಸಬೇಕು
ನಗುತ ನೋವು ಕರಗಬೇಕು
ಬಿಗಿಯಾದ ತೋಳಿಂದ ಅವಳ ಬಳಸಬೇಕು
ಬಳಸಿ ನೀ ನನಗೆನಬೇಕು !

ಕಾರಿರುಳ ಕತ್ತಲಲಿ, ಅವಳ ಕೂಗಿ ಕರೆಯಬೇಕು
ಕರೆದು ಕೆನ್ನೆ ಚಿವುಟಬೇಕು
ಹುಸಿಮುನಿಸು ತೋರಿಸುವ ಅವಳ ನೋಡಬೇಕು
ನೋಡಿ ಮತ್ತೆ ರಮಿಸಬೇಕು !

ಮೋಹದಲೆ ತಲೆಗುರುಳ ಸಿಕ್ಕು ಬಿಡಿಸಬೇಕು
ಬಿಡಿಸಿ ಮಲ್ಲೆ ಮುಡಿಸಬೇಕು
ಹೂವುಗಳ ಮಾತುಗಳ ಇಂಪಾಗಿಸಬೇಕು
ಇಂಪಲಿ ನನ್ನೇ ಮರೆಯಬೇಕು !

ಎಲ್ಲೆಲ್ಲೋ ನೋಡುತಿಹ ಕಣ್ಣ ಸೆಳೆಯಬೇಕು
ಸೆಳೆದು ಹೆಣ್ಣೇ ಎನಬೇಕು
ಒಲವಿಂದ ನಲಿವಿಂದ ಮುತ್ತ ಕದಿಯಬೇಕು
ಕದ್ದು ಪ್ರೀತಿ ಗೆಲ್ಲಬೇಕು !

ಸೋಲಿರದಾ ಪ್ರೀತಿಯಲಿ ಸೋಲು ಕಾಣಬೇಕು
ನಾನು ಸೋತೆ ಎನಬೇಕು !
ಜೀವಗಳ ಪಯಣದಲಿ ಸೋಲೆ ಗೆಲಬೇಕು
ಜೀವನ ಗೆದ್ದು ಮೆರೆಯಬೇಕು !

೩೧-೦೩-೧೨
ಫೋಟೋ :- ಗೂಗಲ್ !

14 comments:

Harisha - ಹರೀಶ said...

ಶೃಂಗಾರ ಮಯ!! ಸೂಪರ್ :)

ಅನುರಾಧ. said...

ಜೀವನದ ಮಧುರ ಕ್ಷಣಗಳ ನೆನಪಿಸುವ ಸುಂದರ ಕವನ... ಸೂಪರ್ ಕವನ....!!

sunaath said...

ನಿಮ್ಮ ಬಯಕೆಗಳೆಲ್ಲ ಫಲಿಸಲಿ!

prabhamani nagaraja said...

ಸಾಮಾನ್ಯ ವಯೋಸಹಜ ಭಾವಪೂರ್ಣ ಕವನ! ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಬನ್ನಿ.

Badarinath Palavalli said...

ಪ್ರೀತಿ ಸೋತು ಗೆದ್ದಾಗಲೇ ಅದರಲ್ಲಿಯೂ ಸಾರ್ಥಕ್ಯ.

ಒಂದು ಒಳ್ಳೆಯ ಪ್ರೇಮ ಪತ್ರವೂ ಆಗಬಲ್ಲ ಕವನ.

ತುಂಬಾ ಇಷ್ಟವಾಯಿತು.

ವೆಂಕಟೇಶ್ ಹೆಗಡೆ said...

ಎಲ್ಲೆಲ್ಲೋ ನೋಡುತಿಹ ಕಣ್ಣ ಸೆಳೆಯಬೇಕು
ಸೆಳೆದು ಹೆಣ್ಣೇ ಎನಬೇಕು
ಒಲವಿಂದ ನಲಿವಿಂದ ಮುತ್ತ ಕದಿಯಬೇಕು
ಕದ್ದು ಪ್ರೀತಿ ಗೆಲ್ಲಬೇಕು !nice ...kirana super

Nivedita Hegde said...

ಬೇಗ ಸೋತು ಬಿಡಿ.. ಚ೦ದಾ ಕವನಾ......

Nagashree said...

ಮನಸಿನ ಮಾತಿಗೆ ಪದಗಳ ಜೋಡಿ....ಅಧ್ಬುತ ಕಲ್ಪನೆ! ಈ ಕವನ ಸಿಕ್ಕಾಪಟ್ಟೆ ಇಷ್ಟ ಆಯ್ತು :)

Poornima said...

ಒಂದೊಂದು ಶಬ್ದನೂ ಎಸ್ಟು ರೊಮ್ಯಾಂಟಿಕ್ ಆಗಿದ್ದು....
ವಾ ಕಿಣ್ಣ ಸಿಕ್ಕಾಪಟ್ಟೆ ಸೂಪರ್ ಇದ್ದು.... ಮಾತಿಲ್ಲ ಕತೆ ಇಲ್ಲ ಬರಿ ರೋಮಾಂಚನ......

nivedita said...

ನಗುವಲ್ಲೆ ಸಿಕ್ಕಿರುವ ಅವಳ ನಾನು ನಗಿಸಬೇಕು
ನಗುತ ನೋವು ಕರಗಬೇಕು....


:) sooper kinana.. very romantic....

Swarna said...

ಚೆನ್ನಾಗಿದೆ.
ನಿಮ್ಮಾಸೆ ಕೈಗೂಡಲಿ :)
ಸ್ವರ್ಣಾ

Swarna said...

ಚೆನ್ನಾಗಿದೆ.
ನಿಮ್ಮಾಸೆ ಕೈಗೂಡಲಿ :)
ಸ್ವರ್ಣಾ

ಕಾವ್ಯಾ ಕಾಶ್ಯಪ್ said...

ಕಿಣ್ಣ ನಿಜಕ್ಕೂ ಅದ್ಭುತ.... ಪ್ರತೀ ಶಬ್ದದಲ್ಲೂ ಶೃಂಗಾರದ ಸುರಿಮಳೆ....
ಜೀವನದ ಪ್ರತೀ ಹೆಜ್ಜೆಯಲ್ಲಿ ಪ್ರೀತಿ ಉಕ್ಕಬೇಕು...
ಆ ರಭಸದಲಿ ಜೋಡಿ ತೇಲಿ ಮುಳುಗಬೇಕು...
ಆನಂದ ಹನಿಸಬೇಕು...
ಮಧುರಾನುಬಂಧ ಬೆಸೆಯಬೇಕು.....

ಕನಸು ನನಸಾಗಲಿ... :)
ಆದ್ರು ಕಿಣ್ಣ ನಂಗೆ ಯಾಕೋ....doubt....! ;)
something something... ;)

ಜಲನಯನ said...

ಕಿರಣ ಸೋಕುತಿದೆ...ಶೋಕಿ ಹರಿಸುತಿದೆ..ಶೃಂಗಾರದ ಶರಧಾರೆ ಎತ್ತಣ ಗುರಿ ಸೇರಲು ಹವಣಿಸಿದೆಯೋ...ಹಹಹ ಕಿರಣ್ ಚನ್ನಾಗಿದೆ ಕವನ...